Sunday, July 7, 2024
HomeಬೆಂಗಳೂರುViral video : ಫುಡ್ ಪ್ಯಾಕೆಟ್ ಎಗರಿಸಿದ ಜೊಮ್ಯಾಟೊ ಡೆಲಿವರಿ ಬಾಯ್‌!..ವಿಡಿಯೋ

Viral video : ಫುಡ್ ಪ್ಯಾಕೆಟ್ ಎಗರಿಸಿದ ಜೊಮ್ಯಾಟೊ ಡೆಲಿವರಿ ಬಾಯ್‌!..ವಿಡಿಯೋ

ಬೆಂಗಳೂರು: ಬೆಂಗಳೂರಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ ಮಾಡಿದ ಕಳ್ಳತನದ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೂ. 25ರಂದು ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಜೊಮ್ಯಾಟೊ ಕೇರ್ ಈ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಹೆಚ್ಚಿನ ಸುದ್ದಿ