35119 POSTS
https://navasamaja.com/ಹುಟ್ಟು, ಓದು, ಕೆಲಸ, ಜೀವನ ಎಲ್ಲ ಬೆಂಗಳೂರಿನಲ್ಲೇ. ಸಿಲಿಕಾನ್ ಸಿಟಿಯ ಬೆಂಗಳೂರಿನವರೇ ಆದ ಅಶ್ವಿನಿ ವ್ಯಾಸಂಗ ಮಾಡಿದ್ದು ಬೆಂಗಳೂರು ವಿವಿಯಲ್ಲಿ ಬಯೋಟೆಕ್ನಾಲಜಿ ಪದವಿಯಾದರೂ ಇವರನ್ನು ಸೆಳೆದಿದ್ದು ಪತ್ರಿಕೋದ್ಯಮ.
ಟಿವಿ ಮಾಧ್ಯಮದ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು, ಸುವರ್ಣ ನ್ಯೂಸ್‌ನಲ್ಲಿ ವರದಿಗಾರ್ತಿಯಾಗಿ ಕೆಲಸ ಪ್ರಾರಂಭಿಸಿದರು. ಇದಾದ ಬಳಿಕ ರಾಜ್ ನ್ಯೂಸ್ ಕನ್ನಡ ವಾಹಿನಿಯಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥೆಯಾಗಿ ನಂತರ ಅದೇ ಸಂಸ್ಥೆಯಲ್ಲಿ ಇನ್‌ಪುಟ್ ಹೆಡ್ ಆಗಿ ಬಡ್ತಿ ಪಡೆದು ಕೆಲಸ ನಿರ್ವಹಿಸಿದ್ದಾರೆ
ವೇಗದ ಟಿವಿ ಮಾಧ್ಯಮಕ್ಕಿಂತಲೂ ವೇಗವಾಗಿ ಬೆಳೆಯತೊಡಗಿದ್ದ ಡಿಜಿಟಲ್ ಪತ್ರಿಕೋದ್ಯಮದತ್ತ ಹೆಜ್ಜೆ ಹಾಕಿದ ಅಶ್ವಿನಿ, ಡೈಲಿ ಹಂಟ್ ಸಂಸ್ಥೆ ಒಡೆತನದ ಪಬ್ಲಿಕ್ ವೈಬ್ ಹೈಪರ್‌ಲೋಕಲ್ ಆಪ್‌ನ ಕರ್ನಾಟಕ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಸುದೀರ್ಘ 16 ವರ್ಷಗಳ ಅನುಭವವಿರುವ ಇವರು ಇದೀಗ ನವಸಮಾಜ.ಕಾಂನ ಸಂಪಾದಕರಾಗಿ ಕೆಲಸ ಮಾಡುತ್ತಿದ್ದು, ಪ್ರಚಲಿತ ರಾಜಕೀಯ ವಿದ್ಯಾಮಾನ, ವಿಜ್ಞಾನ, ತಂತ್ರಜ್ಞಾನ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಬರೆಯುತ್ತಾರೆ. ಓದು ಹಾಗೂ ಸಂಗೀತ ಇವರ ಹವ್ಯಾಸಗಳುNs