Monday, August 17, 2026
Home ಕ್ರೀಡೆ

ಕ್ರೀಡೆ

ಕ್ರೀಡೆ

ಹೆಚ್ಚಿನ ಸುದ್ದಿ

FAROKH ENGINEER: 53 ವರ್ಷಗಳಿಂದ ‘ಪದ್ಮಶ್ರೀ’ ಪದಕಕ್ಕಾಗಿ ಕಾಯುತ್ತಿರುವ ಭಾರತದ ಕ್ರಿಕೆಟ್ ದಂತಕಥೆ ಫಾರೂಕ್ ಇಂಜಿನಿಯರ್!

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ದಂತಕಥೆ, ಮಾಜಿ ವಿಕೆಟ್ ಕೀಪರ್ (Indian Cricket) ಫಾರೂಕ್ ಇಂಜಿನಿಯರ್ (Farokh Engineer) ಅವರಿಗೆ ‘ಪದ್ಮಶ್ರೀ’ (PadmaShri) ಪ್ರಶಸ್ತಿ ಘೋಷಣೆಯಾಗಿ ಬರೋಬ್ಬರಿ 53 ವರ್ಷಗಳೇ ಕಳೆದಿವೆ. ಆದರೆ, ದೇಶದ ಈ ಅತ್ಯುನ್ನತ ನಾಗರಿಕ ಗೌರವ ಪ್ರಕಟವಾದ ಅರ್ಧ ಶತಮಾನದ ನಂತರವೂ ಅವರಿಗೆ ಈವರೆಗೂ ಪ್ರಶಸ್ತಿಯ ಪದಕವಾಗಲಿ ಅಥವಾ ಪ್ರಮಾಣಪತ್ರವಾಗಲಿ ಕೈಸೇರಿಲ್ಲ. ಪ್ರಸ್ತುತ 88 ವರ್ಷದ ಇಂಜಿನಿಯರ್ ಅವರು ಇಂದಿಗೂ ತಮ್ಮ ಪ್ರಶಸ್ತಿಗಾಗಿ ಕಾಯುತ್ತಿರುವುದು ಕ್ರೀಡಾಲೋಕದಲ್ಲಿ ಆಶ್ಚರ್ಯ ಹಾಗೂ ಬೇಸರ ಮೂಡಿಸಿದೆ.

TATA STEEL: ಜೆಎಫ್‌ಎಸ್‌ಪಿಎಲ್‌ 100 ರೂಪಾಯಿಗೆ ಮಾರಾಟ: ಐಎಸ್‌ಎಲ್ ಮಾಲೀಕತ್ವದಿಂದ ಹೊರಬಂದ ಟಾಟಾ ಸ್ಟೀಲ್

ಮುಂಬೈ: ಟಾಟಾ ಸ್ಟೀಲ್ ಸಂಸ್ಥೆಯು (Tata Steel) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಜಮ್‌ಶೆಡ್‌ಪುರ ಎಫ್‌ಸಿ (Jamshedpur FC) ಕ್ಲಬ್‌ನಲ್ಲಿದ್ದ ತನ್ನ ಸಂಪೂರ್ಣ ಮಾಲೀಕತ್ವವನ್ನು ಗೋವಾ ಮೂಲದ 'ಚರ್ಚಿಲ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್'ಗೆ ಕೇವಲ 100 ರೂಪಾಯಿಗಳ ಸಾಂಕೇತಿಕ ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ ಟಾಟಾ ಸ್ಟೀಲ್ ಕಂಪನಿಯು ಐಎಸ್‌ಎಲ್ ಕ್ಲಬ್‌ನ ಮಾಲೀಕತ್ವದಿಂದ (Indian Super League) ಅಧಿಕೃತವಾಗಿ ಹಿಂದೆ ಸರಿದಿದೆ.

LIONEL MESSI : ತಂದೆಯ ನಿಧನದ ಬಳಿಕ ಫುಟ್‌ಬಾಲ್‌ಗೆ ವಿದಾಯ? ಮುಂದೆ ಏನು ಮಾಡಬೇಕೋ ಗೊತ್ತಿಲ್ಲ ಎಂದ ಮೆಸ್ಸಿ!

ಅರ್ಜೆಂಟಿನಾ ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ (lionel Messi) ಅವರ ಮುಂದಿನ ವೃತ್ತಿಜೀವನದ ಬಗ್ಗೆ ಇದೀಗ ಅನುಮಾನ ಮೂಡಿದೆ. ತಂದೆ ಜಾರ್ಜ್‌ ಮೆಸ್ಸಿ ಅವರ ನಿಧನದ ಬಳಿಕ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಮೆಸ್ಸಿ, ಇನ್ನು ಎಷ್ಟು ದಿನ ಫುಟ್‌ಬಾಲ್‌ (Football) ಮುಂದುವರಿಸುತ್ತೇನೆ ಎಂಬ ಬಗ್ಗೆ ತಮಗೇ ಗೊಂದಲವಿದೆ ಎಂದು ಹೇಳಿಕೊಂಡಿದ್ದಾರೆ. 

IND VS BAN : ಭಾರತ-ಬಾಂಗ್ಲಾದೇಶ ಕ್ರಿಕೆಟ್‌ ಸಂಬಂಧಕ್ಕೆ ಮತ್ತೆ ಜೀವ – ದ್ವಿಪಕ್ಷೀಯ ಸರಣಿ ಪುನರಾರಂಭಕ್ಕೆ ಮಾತುಕತೆ!

ಭಾರತ ಮತ್ತು ಬಾಂಗ್ಲಾದೇಶ (Ind Vs Ban) ನಡುವಿನ ಕ್ರಿಕೆಟ್‌ (Cricket) ಸಂಬಂಧಕ್ಕೆ ಮತ್ತೆ ಚಾಲನೆ ನೀಡುವ ಪ್ರಯತ್ನಗಳು ಆರಂಭವಾಗಿವೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನು ಪುನರಾರಂಭಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್‌ ಹಕ್‌ ತಿಳಿಸಿದ್ದಾರೆ.

BREAKING : ಖ್ಯಾತ ಫುಟ್‌ ಬಾಲ್‌ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಗುಪ್ತ ವಿವಾಹ – ಧೀರ್ಘಕಾಲದ ಗೆಳತಿಯೊಡನೆ ಸಪ್ತಪದಿ!

ಖ್ಯಾತ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ತಮ್ಮ ಸುದೀರ್ಘ ಕಾಲದ ಸಂಗಾತಿ ಜಾರ್ಜಿನಾ ರೊಡ್ರಿಗೇಜ್ ಅವರೊಂದಿಗೆ  ಗುಪ್ತವಾದ ಹಾಗೂ ಸರಳ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈದಾನದಲ್ಲಿ ತಮ್ಮ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ರೊನಾಲ್ಡೋ, ಈ ಬಾರಿ ತಮ್ಮ ಮದುವೆಯ ಸುದ್ದಿಯ ಮೂಲಕ ಜಗತ್ತಿನಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ದಿಢೀರ್ ಅಚ್ಚರಿ ನೀಡಿದ್ದಾರೆ.

ABISHEK POREL: ಮದುವೆಯಾಗುವುದಾಗಿ ನಂಬಿಸಿ ರೇ*ಪ್, ಹಲ್ಲೆ: ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅರೆಸ್ಟ್‌

ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ಅತ್ಯಾಚಾರ, ಹಲ್ಲೆ ಹಾಗೂ ಜೀವ ಬೆದರಿಕೆ ದೂರಿನ ಆಧಾರದ ಮೇಲೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ಮಿಂಚಿದ್ದ ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ (Abishek Porel) ಅವರನ್ನು ಪೊಲೀಸರು ಬಂಧಿಸಿದ್ದಾರೆ.  

SPORTS: ವಿಶ್ವ ಅಥ್ಲೆಟಿಕ್ಸ್ ಯು-20: ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಬಸಂತ್

ವರ್ಲ್ಡ್ ಅಥ್ಲೆಟಿಕ್ಸ್ U20 ಚಾಂಪಿಯನ್‌ಷಿಪ್‌ನಲ್ಲಿ (World Athletics U20 Championships) ಭಾರತದ ಕ್ರೀಡಾಪಟುಗಳು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಪುರುಷರ ಹೈಜಂಪ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ 19 ವರ್ಷದ ಬಸಂತ್ ಕುಮಾರ್ ಮೇಘವಾಲ್ (Basant Kumar Meghwal) ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

PCB : ಅನುಮತಿ ಇಲ್ಲದ ಲೀಗ್ ನಲ್ಲಿ ಆಡಿದ ಪಾಕ್ ಆಟಗಾರರು – 2 ವರ್ಷ ನಿಷೇಧದ ಭೀತಿ!

ಜಾಂಬಿಯಾದಲ್ಲಿ ನಡೆದ ಅನುಮತಿ ಪಡೆಯದ ಟಿ20 ಲೀಗ್‌ನಲ್ಲಿ ಭಾಗವಹಿಸಿದ ಪಾಕಿಸ್ತಾನದ (Pakistan) ಹಲವು ಮಾಜಿ ಕ್ರಿಕೆಟಿಗರು (Cricketers) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ಅನುಮತಿ ಹಾಗೂ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ ಟೂರ್ನಿಯಲ್ಲಿ ಆಡಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆಟಗಾರರ ವಿರುದ್ಧ ಎರಡು ವರ್ಷಗಳ ನಿಷೇಧ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿ

PRAGGNANANDHAA: ಚೆಸ್‌ ಲೋಕದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ – ಸೇಂಟ್ ಲೂಯಿಸ್ ರಾಪಿಡ್, ಬ್ಲಿಟ್ಜ್ ಪ್ರಶಸ್ತಿ ಗೆದ್ದ ಪ್ರಜ್ಞಾನಂದ

ಇಂಡಿಯನ್ ಗ್ರಾಂಡ್‌ಮಾಸ್ಟರ್ ಆರ್‌. ಪ್ರಜ್ಞಾನಂದ (Praggnanandhaa) ಅವರು ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಭಾರತದ (India) ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಸೇಂಟ್ ಲೂಯಿಸ್‌ನಲ್ಲಿ (Saint Louis) ನಡೆದ 'ಗ್ರ್ಯಾಂಡ್ ಚೆಸ್ ಟೂರ್ ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್' ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

LIONEL MESSI : ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ತಂದೆ ಜಾರ್ಜ್ ಮೆಸ್ಸಿ ವಿಧಿವಶ

ವಿಶ್ವ ಫುಟ್‌ಬಾಲ್ ಅಂಗಳದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅವರ ತಂದೆ ಜಾರ್ಜ್ ಮೆಸ್ಸಿ (68) ಶನಿವಾರ ನಿಧನರಾಗಿದ್ದಾರೆ.

COMMONWEALTH GAMES : 2030ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ಆತಿಥ್ಯ: ಯೋಗ, ಕಬಡ್ಡಿಗೆ ಅಳವಡಿಕೆಗೆ ಚಿಂತನೆ

2030ರ ಕಾಮನ್‌ವೆಲ್ತ್ ಕ್ರೀಡಾಕೂಟದ (2030 Commonwealth Games) ಆತಿಥ್ಯ ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಗೊಂಡಿದ್ದು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಜಾಗತಿಕ ಕ್ರೀಡಾ ಮಹಾಕುಂಭವನ್ನು ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

CRICKET: 2027 ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯ ದಿನಾಂಕ ನಿಗದಿ – ಎಂಟ್ರಿ ಟಿಕೆಟ್ ಗಾಗಿ 10 ತಂಡಗಳ ಕಾದಾಟ

2027ರ ಏಕದಿನ ಕ್ರಿಕೆಟ್ (ODI) ವಿಶ್ವಕಪ್‌ಗೆ (World Cup 2027) ಮುನ್ನ ಅರ್ಹತಾ ಟೂರ್ನಿ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಂತಿಮಗೊಳಿಸಿದೆ.

HARYANA : ಪದಕ ಗೆಲ್ಲಲು ಹರ್ಯಾಣ, ಕೋಟಿ ಅನುದಾನ ಗುಜರಾತ್‌ಗಾ?: ಸಂಸದ ದೀಪೆಂದರ್ ಹೂಡಾ ಪ್ರಶ್ನೆ

ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪದಕಗಳನ್ನು(Medal) ಗೆದ್ದುಕೊಡುತ್ತಿರುವುದು ಹರ್ಯಾಣದ(Haryana) ಕ್ರೀಡಾಪಟುಗಳು, ಆದರೆ ಬೃಹತ್ ಕ್ರೀಡಾಕೂಟಗಳ ಆತಿಥ್ಯ ಮತ್ತು ಲಕ್ಷ ಕೋಟಿ ರೂಪಾಯಿ ಮೂಲಸೌಕರ್ಯಗಳನ್ನು ಗುಜರಾತ್‌ಗೆ(Gujarat) ಮಾತ್ರ ನೀಡಲಾಗುತ್ತಿದೆ

COMMONWEALTH GAMES: ಮುಂದಿನ ಕಾಮನ್‌ವೆಲ್ತ್‌ ಆತಿಥ್ಯ ಭಾರತಕ್ಕೆ – ಗ್ಲಾಸ್ಗೋದಲ್ಲಿ ಅಧಿಕೃತ ಧ್ವಜ ಸ್ವೀಕರಿಸಿದ ನೀರಜ್ ಚೋಪ್ರಾ, ಪಿ.ಟಿ. ಉಷಾ

ಗ್ಲಾಸ್ಗೋದಲ್ಲಿ(Glasgow) ನಡೆದ 11 ದಿನಗಳ 2026ರ ಕಾಮನ್‌ವೆಲ್ತ್ ಕ್ರೀಡಾಕೂಟವು(Commonwealth Games) ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿದೆ.

YUVRAJ SINGH : ಯುವರಾಜ್ ಸಿಂಗ್ ಹೆಸರು, ಚಿತ್ರ ಹಾಗೂ ಡೀಪ್‌ಫೇಕ್ ದುರ್ಬಳಕೆಗೆ ದೆಹಲಿ ಹೈಕೋರ್ಟ್ ತಡೆ!

ಭಾರತೀಯ ಕ್ರಿಕೆಟ್ ತಂಡದ (Team India) ದಂತಕಥೆ ಯುವರಾಜ್ ಸಿಂಗ್ (Yuvraj Singh) ಅವರ 'ಪರ್ಸನಾಲಿಟಿ ರೈಟ್ಸ್' (ವ್ಯಕ್ತಿತ್ವದ ಹಕ್ಕು) ರಕ್ಷಣೆಗೆ ದೆಹಲಿ ಹೈಕೋರ್ಟ್ (Delhi High Court) ಮಹತ್ವದ ಮಧ್ಯಂತರ ಆದೇಶ ನೀಡಿದೆ. ಯುವರಾಜ್ ಅವರ ಹೆಸರು, ಭಾವಚಿತ್ರ, ಧ್ವನಿ ಹಾಗೂ ವ್ಯಕ್ತಿತ್ವದ ಯಾವುದೇ ಗುಣಲಕ್ಷಣಗಳನ್ನು ಅವರ ಅನುಮತಿಯಿಲ್ಲದೆ ವಾಣಿಜ್ಯಿಕ ಅಥವಾ ವೈಯಕ್ತಿಕ ಲಾಭಕ್ಕಾಗಿ ಬಳಸುವುದನ್ನು ನ್ಯಾಯಾಲಯ ಕಟ್ಟುನಿಟ್ಟಾಗಿ ನಿಷೇಧಿಸಿದೆ.

COMMONWEALTH : ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ 4 ನೇ ಸ್ಥಾನ – 39 ಪದಕ ಗೆದ್ದು ಬೀಗಿದ ಭಾರತ

2026ರ ಕಾಮನ್‌ವೆಲ್ತ್ (Commonwealth) ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಭಾರತೀಯ ಕ್ರೀಡಾಪಟುಗಳು ಅತ್ಯದ್ಭುತ ಪ್ರದರ್ಶನದೊಂದಿಗೆ ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದ್ದಾರೆ.

CRICKET: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಬುಮ್ರಾ ಔಟ್ – ಟೀಂ ಇಂಡಿಯಾಗೆ ಕಾಡಲಿದೆ ಜಸ್ಪ್ರೀತ್ ಅನುಪಸ್ಥಿತಿ

ಭಾರತ ಕ್ರಿಕೆಟ್ ತಂಡದ (Team India) ಜಸ್ಪ್ರೀತ್ ಬುಮ್ರಾ (Jasprit Bumrah) ಮೊಣಕಾಲಿನ ಗಾಯದಿಂದ ಶ್ರೀಲಂಕಾ (Srilanka) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

SPORTS: ಟಿಶ್ಯೂ ಪೇಪರ್ ಮೇಲೆ ‘ಅರೆಬರೆ’ ಭಾರತದ ನಕ್ಷೆ: ಗ್ಲಾಸ್ಗೋ ರೆಸ್ಟೋರೆಂಟ್ ವಿರುದ್ಧ ಕ್ರೀಡಾಪಟುಗಳ ಆಕ್ರೋಶ!

ಗ್ಲಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟ 2026ರ (Commonwealth Games 2026) ಹಿನ್ನೆಲೆಯಲ್ಲಿ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿರುವ 'ಮಿಸ್ಟರ್ ಸಿಂಗ್ಸ್‌ ಇಂಡಿಯಾ – ಕರಿ ಹೌಸ್' (Mr Singhs India) ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಭೋಜನಕೂಟದಲ್ಲಿ ನಕ್ಷೆಯ ಎಡವಟ್ಟಿನಿಂದಾಗಿ ಹೊಸ ವಿವಾದವೊಂದು (India Map Controversy) ಸೃಷ್ಟಿಯಾಗಿದೆ.

SPORTS : ತೈಪೆ ಓಪನ್‌ನಲ್ಲಿ ಭಾರತದ ತನ್ವಿ ಶರ್ಮಾ ಚಾಂಪಿಯನ್ – 17ರ ಹರೆಯದಲ್ಲೇ ದಾಖಲೆ ಬರೆದ ಯುವತಿ

ಭಾರತದ ಬ್ಯಾಡ್ಮಿಂಟನ್ (Badminton) ಆಟಗಾರ್ತಿ ತನ್ವಿ ಶರ್ಮಾ (Tanvi Sharma) ತೈಪೆ ಓಪನ್ (Taipei Open) ಮಹಿಳಾ ಸಿಂಗಲ್ಸ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

HARDIK PANDYA : ಕಷ್ಟಗಳಿಂದ ಮುಕ್ತಿಗಾಗಿ ತಲೆಗೂದಲು ಮುಂಡನ – ತಿರುಪತಿಯಲ್ಲಿ ಪ್ರೇಯಸಿಯೊಂದಿಗೆ ಹಾರ್ದಿಕ್‌ ಪಾಂಡ್ಯ!-VIDEO

ಮೈದಾನದಲ್ಲಿ ಬ್ಯಾಟ್ ಹಾಗೂ ಬಾಲ್ ಮೂಲಕ ಸದ್ದು ಮಾಡುತ್ತಿದ್ದ ಟೀಮ್ ಇಂಡಿಯಾ (Team India) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಸದ್ಯ ಧಾರ್ಮಿಕ ಕೇಂದ್ರಗಳಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಸಾಲು ಸಾಲು ಗಾಯದ ಕಂಟಕ ಹಾಗೂ ಆಟದಲ್ಲಿ ಎದುರಾಗಿರುವ ಸತತ ಹಿನ್ನಡೆಗಳಿಂದ ತೀವ್ರ ನಿರಾಸೆಗೊಂಡಿರುವ ಪಾಂಡ್ಯ, ಕಷ್ಟಗಳಿಂದ ಮುಕ್ತಿ ಪಡೆಯಲು ಪ್ರಸಿದ್ಧ ತಿರುಪತಿ (Tirupati) ವೆಂಕಟೇಶ್ವರ ಸ್ವಾಮಿಯ ಮೊರೆಹೋಗಿದ್ದಾರೆ.

COMMONWEALTH : ಒಂದೇ ದಿನ 16 ಪದಕ ಗೆದ್ದ ಭಾರತ -ಬಾಕ್ಸಿಂಗ್ ರಿಂಗ್ ನಲ್ಲಿ ಇಂಡಿಯಾ ಆರ್ಭಟ!

2026ರ ಕಾಮನ್‌ವೆಲ್ತ್‌ (Commonwealth) ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು (Indian Athletes) ಅಭೂತಪೂರ್ವ ಪ್ರದರ್ಶನ ನೀಡಿದ್ದು, ಶನಿವಾರ ಒಂದೇ ದಿನ ಸಾಲು ಸಾಲು ಪದಕಗಳನ್ನು ಗೆದ್ದು (Medales) ಬೀಗಿದ್ದಾರೆ. ಅದರಲ್ಲೂ ಬಾಕ್ಸಿಂಗ್ ಅಖಾಡದಲ್ಲಿ ಎದುರಾಳಿಗಳಿಗೆ ಪಂಚ್ ನೀಡಿದ ಭಾರತೀಯ ಬಾಕ್ಸರ್‌ಗಳು ಬರೋಬ್ಬರಿ 7 ಚಿನ್ನದ ಪದಕಗಳನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ.

SPORTS : ಕಾಮನ್‌ವೆಲ್ತ್ ಕ್ರೀಡಾಕೂಟ 2026 – ಬಂಗಾರದ ಬೇಟೆ ಮುಂದುವರಿಸಿದ ಭಾರತ

2026ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth 2026) ಹತ್ತನೇ ದಿನದಂದು ಭಾರತದ ಕ್ರೀಡಾಪಟುಗಳು (Indian Athletes) ಅತ್ಯುತ್ತಮ ಸಾಧನೆ ತೋರಿದ್ದಾರೆ.

CRIME : ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರಾ ಪತ್ನಿ ಶವವಾಗಿ ಪತ್ತೆ: ಪೋಲಿಸರಿಂದ ಪತಿ ವಿಚಾರಣೆ!

ಪ್ರಸಿದ್ಧ ಅಂತರರಾಷ್ಟ್ರೀಯ ಕಬಡ್ಡಿ (kabaddi )ಆಟಗಾರ ಶೀಲು ಬಲ್ಹಾರಾ ಅವರ 23 ವರ್ಷದ ಪತ್ನಿ ಮುಸ್ಕಾನ್, ಹರಿಯಾಣದ ರೋಹ್ಟಕ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ (Crime) ಪತ್ತೆಯಾಗಿದ್ದಾರೆ.

COMMONWEALTH GAMES : ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಜೋಡಿ ಪದಕ; ನೀರಜ್‌ಗೆ ಬೆಳ್ಳಿ, ಯಶ್‌ವೀರ್‌ಗೆ ಕಂಚು

ಮನ್‌ವೆಲ್ತ್ ಗೇಮ್ಸ್(Commonwealth Game) 2026ರ ಪುರುಷರ ಜಾವೆಲಿನ್ ಎಸೆತದ(javelin throw) ಫೈನಲ್‌ನಲ್ಲಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತದ ತಾರಾ ಎಸೆತಗಾರ ನೀರಜ್ ಚೋಪ್ರಾ(Neeraj Chopra)

COMMONWEALTH GAMES: 48 ಕೆಜಿ ಜೂಡೋ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ ಅಸ್ಮಿತಾ ..

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 'ಕಾಮನ್‌ವೆಲ್ತ್ ಗೇಮ್ಸ್ 2026'ರಲ್ಲಿ (Commonwealth Games 2026) ಭಾರತದ ಜೂಡೋ (Judo) ಪಟು ಅಸ್ಮಿತಾ ಡೇ (Asmita Dey) ಹೊಸ ಇತಿಹಾಸ ನಿರ್ಮಿಸಿದ್ದಾರೆ. 

SPORTS : ಕಾಮನ್‌ವೆಲ್ತ್ ಗೇಮ್ಸ್ 2026 – ಮುಂದುವರಿದ ಭಾರತೀಯರ ಪದಕದ ಬೇಟೆ

2026ರ ಕಾಮನ್‌ವೆಲ್ತ್ (Commonwealth 2026) ಕ್ರೀಡಾಕೂಟದ 9ನೇ ದಿನ ಭಾರತೀಯ ಸ್ಪರ್ಧಿಗಳು (Indian athletes) ಅದ್ಭುತ ಪ್ರದರ್ಶನ ನೀಡಿದ್ದಾರೆ.

COMMONWEALTH GAMES 2026 : ಜಾವೆಲಿನ್ ಥ್ರೋ ಫೈನಲ್‌ಗೆ ನೀರಜ್ ಚೋಪ್ರಾ ಪ್ರವೇಶ

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ (Neeraj chopra) ಅವರು 2026ರ ಕಾಮನ್‌ವೆಲ್ತ್ ಗೇಮ್ಸ್ ನ (Commonwealth Games) ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.

HOCKEY INDIA: ಟೀಮ್ ಇಂಡಿಯಾ ಹಾಕಿ ಜೆರ್ಸಿ ಬಣ್ಣ ಬದಲಾವಣೆ: ವಿವಾದಕ್ಕೆ ತಾಂತ್ರಿಕ ಕಾರಣ ನೀಡಿದ ಹಾಕಿ ಇಂಡಿಯಾ

ಮುಂಬರುವ 2026ರ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಜೆರ್ಸಿ ಬಣ್ಣವನ್ನು ಬದಲಾಯಿಸಿರುವ ನಿರ್ಧಾರದ ಕುರಿತು ದೇಶದ ಹಾಕಿ ಆಡಳಿತ ಮಂಡಳಿಯಾದ 'ಹಾಕಿ ಇಂಡಿಯಾ' (Hockey India) ಮಹತ್ವದ ಸ್ಪಷ್ಟನೆ ನೀಡಿದೆ

HOCKEY TEAM: ನೀಲಿ ಬದಲು ಕೇಸರಿ ಜೆರ್ಸಿ ತೊಟ್ಟ ಭಾರತೀಯ ಹಾಕಿ ಪಡೆ – ಮಾಜಿ ಆಟಗಾರರ ಅಸಮಾಧಾನ

ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಎಫ್‌ಐಎಚ್ (FIH) ವಿಶ್ವಕಪ್ ಕೂಟದಲ್ಲಿ ಭಾಗವಹಿಸಲಿರುವ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳಿಗೆ (Indian Hockey Team) ಸಾಂಪ್ರದಾಯಿಕ ನೀಲಿ (Blue) ಬಣ್ಣದ ಬದಲಾಗಿ ಹೊಸ 'ಕೇಸರಿ' (Saffron) ಬಣ್ಣದ ಜೆರ್ಸಿಯನ್ನು ಪರಿಚಯಿಸಲಾಗಿದೆ.

AJINKYA RAHANE :ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಅಜಿಂಕ್ಯ ರಹಾನೆ ದಿಢೀರ್ ವಿದಾಯ – ಟೆಸ್ಟ್ ಹೀರೋನ ಸುದೀರ್ಘ ಪಯಣ ಅಂತ್ಯ!

ಭಾರತೀಯ ಕ್ರಿಕೆಟ್ ತಂಡದ (Team India) ಹಿರಿಯ ಬ್ಯಾಟರ್ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ವಿಜೇತ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ದಿಢೀರ್ ನಿವೃತ್ತಿ (Retirement) ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಜಗತ್ತಿನ ಸುದೀರ್ಘ ಹಾಗೂ ಅತ್ಯಂತ ಯಶಸ್ವಿ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

CABINET EXPANSION : ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು – ದೆಹಲಿಯಿಂದ ವಾಪಸಾದ ಕೈ ಶಾಸಕರು!

ರಾಜ್ಯ ಕಾಂಗ್ರೆಸ್ ಸರ್ಕಾರದ (Congress Govt) ಸಂಪುಟ ವಿಸ್ತರಣೆಯ (Cabinet Expansion) ಹೈಡ್ರಾಮಾಗೆ ಕೊನೆಗೂ ತೆರೆಬಿದ್ದಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತು ರಾಜ್ಯದ ಪ್ರಮುಖ ನಾಯಕರು ಕಾಂಗ್ರೆಸ್ ಹೈಕಮಾಂಡ್ (High Command) ನಾಯಕರ ಭೇಟಿಗಾಗಿ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ವಾಸ್ತವ್ಯ ಹೂಡಿ ಕಾದು ಕಾದು ಸಂಪೂರ್ಣ ಸುಸ್ತಾಗಿದ್ದಾರೆ. 

RCB : ಆರ್‌ಸಿಬಿ ಗತ್ತು ಎಲ್ಲರಿಗೂ ಗೊತ್ತು.. – 2.9 ಸಾವಿರ ಕೋಟಿ ದಾಟಿದ ಆರ್‌ಸಿಬಿ ಬ್ರ್ಯಾಂಡ್ ಮೌಲ್ಯ!

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮೈಲಿಗಲ್ಲು ನೆಟ್ಟಿದೆ. 300 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 2,986 ಕೋಟಿ ರೂಪಾಯಿ) ಬ್ರ್ಯಾಂಡ್ ಮೌಲ್ಯವನ್ನು ದಾಟಿದ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.

COMMONWEALTH : ಭಾರತಕ್ಕೆ ಪದಕಗಳ ಸುರಿಮಳೆ – ದಿಲೀಪ್ ಗಾವಿತ್‌ ಗೆ ಚಿನ್ನ, ಮುರಳಿ ಶ್ರೀಶಂಕರ್‌ ಗೆ ಬೆಳ್ಳಿ

ಕಾಮನ್‌ವೆಲ್ತ್ ಕ್ರೀಡಾಕೂಟ(Commonwealth Games ) 2026ರಲ್ಲಿ ಭಾರತೀಯ ಕ್ರೀಡಾಪಟುಗಳು(Indian athletes) ಅದ್ಭುತ ಪ್ರದರ್ಶನ ಮುಂದುವರಿಸಿದ್ದು, ಜುಲೈ 29ರ ಸ್ಪರ್ಧೆಗಳಲ್ಲಿ ಭಾರತಕ್ಕೆ ಮಹತ್ವದ ಪದಕಗಳು ಒಲಿದುಬಂದಿವೆ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ದಿಲೀಪ್ ಮಹಾದು ಗಾವಿತ್ ಅವರು ಚಾರಿತ್ರಿಕ ಚಿನ್ನದ ಪದಕ ಸಾಧನೆ ಮಾಡಿದ್ದರೆ, ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

CRICKET: ಲೈಂಗಿಕ ಕಿರುಕುಳ ಪ್ರಕರಣ: ಕ್ರಿಕೆಟಿಗ ಯಶ್ ದಯಾಳ್‌ಗೆ ಅಲಹಾಬಾದ್ ಹೈಕೋರ್ಟ್‌ನಿಂದ ರಿಲೀಫ್

ಲೈಂಗಿಕ ಶೋಷಣೆ (Sexual harassment) ಆರೋಪವನ್ನು ಎದುರಿಸುತ್ತಿದ್ದ ಕ್ರಿಕೆಟಗ (Cricketer) ಯಶ್ ದಯಾಳ್ (Yash Dayal) ಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

COMMONWEALTH GAMES 2026: ಭಾರತಕ್ಕೆ ಮತ್ತೆರಡು ಪದಕ ಖಚಿತಪಡಿಸಿದ ಸಾಕ್ಷಿ, ಅರುಂಧತಿ!

2026ರ ಕಾಮನ್‌ವೆಲ್ತ್ ಗೇಮ್ಸ್‌ನ (Commonwealth Games 2026) ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳಾದ ಸಾಕ್ಷಿ ಚೌಧರಿ ಮತ್ತು ಅರುಂಧತಿ ಚೌಧರಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಕನಿಷ್ಠ ಎರಡು ಕಂಚಿನ ಪದಕಗಳನ್ನು ಖಚಿತಪಡಿಸಿದ್ದಾರೆ.

COMMON WEALTH : ಕಾಮನ್ ವೆಲ್ತ್ ಕ್ರೀಡಾಕೂಟ.. ಮೈಸೂರಿನ ಯುವತಿಗೆ ಕಂಚಿನ ಪದಕ..!

ಸ್ಕಾಟ್ಲೆಂಡ್‌ನ (Scotland ) ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ (Common wealth ) ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು (Sportsman ) ಐತಿಹಾಸಿಕ ಸಾಧನೆ ಮೆರೆದಿದ್ದಾರೆ

COMMONWEALTH : ಕಾಮನ್‌ ವೆಲ್ತ್‌ ನಲ್ಲಿ ಭಾರತಕ್ಕೆ ಸುಗ್ಗಿ – ಇಲ್ಲಿಯವರೆಗೂ 10 ಪದಕಗಳಿಗೆ ಕೊರಳೊಡ್ಡಿದ ಇಂಡಿಯನ್ಸ್‌!

ರಷ್ಯಾ : ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ (Commonwealth) ಕ್ರೀಡಾಕೂಟದ ನಾಲ್ಕನೇ ದಿನ ಭಾರತೀಯ ಕ್ರೀಡಾಪಟುಗಳು (Indian athletes) ಅದ್ಭುತ ಪ್ರದರ್ಶನ ನೀಡಿದ್ದು, ಅಥ್ಲೆಟಿಕ್ಸ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ದೇಶದ ಪದಕದ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ....

COMMONWEALTH : ಕಾಮನ್‌ವೆಲ್ತ್ ಕ್ರೀಡಾಕೂಟ – ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ರಾಜಾ ಮುತ್ತುಪಾಂಡಿಗೆ ಬೆಳ್ಳಿ ಪದಕ!

ಇಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ (Commonwealth) ಕ್ರೀಡಾಕೂಟದಲ್ಲಿ ಭಾರತದ (India) ವೇಟ್‌ಲಿಫ್ಟರ್‌ಗಳು (Weightlifting) ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾನುವಾರ ನಡೆದ ಪುರುಷರ 65 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ರಾಜಾ ಮುತ್ತುಪಾಂಡಿ ಅವರು ಅದ್ಭುತ ಸಾಧನೆ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ (Silver Medal) ಕೊರಳೊಡ್ಡಿದ್ದಾರೆ.

CRICKET : ನೀನು ಮಿಂಚಿನ ಮರಿಯೋ, ಸಿಡಿಲಿನ ಕಿಡಿಯೋ – ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆ ಬರೆದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ (Vaibhav Sooryavanshi) ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T 20 Cricket) ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ.

CRICKET: ಜಿಂಬಾಬ್ವೆ ವಿರುದ್ಧ 3-0 ಕ್ಲೀನ್‌ಸ್ವೀಪ್; ಶ್ರೇಯಸ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಟಿ20 ಸರಣಿ ಜಯ

ಜಿಂಬಾಬ್ವೆಯಲ್ಲಿ (Zimbabwe) ನಡೆಯುತ್ತಿರುವ 3 ಟಿ20 ಸರಣಿಯನ್ನು (t20) ಭಾರತ (Team India) ಕ್ಲೀನ್‌ಸ್ವೀಪ್ (Cleansweep) ಸಾಧಿಸುವ ಗುರಿ ಹೊಂದಿದೆ

BIG NEWS:‌ ಸ್ಕ್ವಾಶ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ: ವಿಶ್ವ ಜೂನಿಯರ್ ಚಾಂಪಿಯನ್ ಆಗಿ ಅನಾಹತ್ ಸಿಂಗ್ ಸಾಹಸ! VIDEO

ಅನಾಹತ್ ಸಿಂಗ್ (Anahat Singh) ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್‌ನಲ್ಲಿ ನಡೆದ 2026ರ ‘ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌’ನ (World Junior Squash Championship) ಮಹಿಳೆಯರ ಸಿಂಗಲ್ಸ್‌ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ

COMMONWEALTH GAMES: ವೈಕಲ್ಯ ಮೆಟ್ಟಿ ಸಾಧನೆಗೈದ ಝಂಡುಕುಮಾರ್‌ – ಕಾಮನ್ವೆಲ್ತ್‌ ನಲ್ಲಿ ಭಾರತಕ್ಕೆ ಮೊದಲ ಕಂಚು

ಗ್ಲ್ಯಾಸ್ಗೊ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (Commonwealth Games) ಭಾರತವು (India) ತನ್ನ ಪದಕದ (Medal) ಖಾತೆಯನ್ನು ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಝಂಡು ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

TEAM INDIA : ವಿಶಿಷ್ಟ ರೀತಿಯಲ್ಲಿ ದೋನಿ ದಾಖಲೆ ಮುರಿದ ಶ್ರೇಯಸ್ ಅಯ್ಯರ್!

ಏಳು ಸತತ ಸೋಲುಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ (Team India) T20I ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಕೊನೆಗೂ ಜಯದ ಸವಿ ಉಂಡಿದ್ದಾರೆ. ಜಿಂಬಾಬ್ವೆ (Zimbabwe) ವಿರುದ್ಧ ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ T20I ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಆಕರ್ಷಕ ಗೆಲುವು ಸಾಧಿಸಿದೆ. ಈ ಮೂಲಕ ನಾಯಕನಾಗಿ ಅಯ್ಯರ್ ತಮ್ಮ ಸೋಲಿನ ಸರಣಿಗೆ ತೆರೆ ಎಳೆದಿದ್ದಾರೆ.

CRICKET: ಜಿಂಬಾಬ್ವೆ ವಿರುದ್ಧ ವೈಭವ್ ಸೂರ್ಯವಂಶಿ ಸಿಡಿಲಬ್ಬರ ; 15ರ ಹರೆಯದಲ್ಲೇ ಐತಿಹಾಸಿಕ ದಾಖಲೆ

ವೈಭವ್ ಸೂರ್ಯವಂಶಿ (Vybhav suryavanshi), ಜಿಂಬಾಬ್ವೆ (Zimbabwe) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಆಟದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದರು.

NEET SCAM : ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೇಶವೇ ಒಗ್ಗೂಡಲಿ.. – ಒಲಿಂಪಿಕ್ಸ್ ತಾರೆ ಅಭಿನವ್ ಬಿಂದ್ರಾ!

ನೀಟ್ ಪರೀಕ್ಷಾ (Neet Scam) ಅಕ್ರಮ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಆಕ್ರೋಶದ (Protest) ಮುಗಿಲು ಮುಟ್ಟಿರುವ ಬೆನ್ನಲ್ಲೇ, ಭಾರತದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ (Abhinav Bhindra) ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. 

PV SINDHU : ಚೈನಾ ಓಪನ್ ಬ್ಯಾಡ್ಮಿಂಟನ್ – ಪ್ರಿ-ಕ್ವಾರ್ಟರ್ಸ್‌ನಲ್ಲಿ ಪಿ.ವಿ. ಸಿಂಧುಗೆ ನಿರಾಸೆ!

ಚೈನಾ ಓಪನ್ ಬ್ಯಾಡ್ಮಿಂಟನ್(Badminton) ಟೂರ್ನಿಯ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು(P.V. Sindhu) ರೋಮಾಂಚಕ ಹೋರಾಟ ನಡೆಸಿ ಚೀನಾದ(China) ಚೆನ್ ಯುಫೇಯ್ ವಿರುದ್ಧ ಪರಾಜಯಗೊಂಡಿದ್ದಾರೆ.

COMMONWEALTH GAMES: ಕಾಮನ್‌ವೆಲ್ತ್‌ ಪ್ಯಾರಾ ಅಥ್ಲೆಟಿಕ್ಸ್‌ಗೆ ಮೈಸೂರಿನ ಶಿಲ್ಪಾ ಆಯ್ಕೆ – ಪದಕದ ನಿರೀಕ್ಷೆಯಲ್ಲಿ ಭಾರತ

ಮೈಸೂರು: ಅಂಗವೈಕಲ್ಯವನ್ನು ಮೆಟ್ಟಿನಿಂತು ಸತತ ಪರಿಶ್ರಮದಿಂದ ಮುನ್ನಡೆದಿರುವ ಮೈಸೂರು (Mysuru) ಜಿಲ್ಲೆಯ ಕೆ.ಎಸ್. ಶಿಲ್ಪಾ (KS Shilpa), ಸ್ಕಾಟ್ಲೆಂಡ್‌ನ ಗ್ಲಾಸ್ಗೊನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (Commonwealth Games) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

COMMONWEALTH: ಕಾಮನ್‌ವೆಲ್ತ್ ಕ್ರೀಡಾಕೂಟ 2026, ಹೀಗಿದೆ ಭಾರತದ ವೇಳಾಪಟ್ಟಿ

ಇಂದಿನಿಂದ ಬಹುನಿರೀಕ್ಷಿತ 2026ರ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2026) ಅಧಿಕೃತವಾಗಿ ಆರಂಭವಾಗುತ್ತಿದ್ದು, ಭಾರತ ತನ್ನ ಪದಕದ ಬೇಟೆಯನ್ನು ಲಾನ್ ಬೌಲ್ಸ್ ಆಟದ ಮೂಲಕ ಆರಂಭ ಮಾಡಲಿದೆ.

LALITH MODI : ಐಪಿಎಲ್ ಕೇಸ್ ನಲ್ಲಿ ಬಿಗ್ ರಿಲೀಫ್ – 16 ವರ್ಷಗಳ ಬಳಿಕ ಭಾರತಕ್ಕೆ ಮರಳಲಿರುವ ಲಲಿತ್ ಮೋದಿ

ಐಪಿಎಲ್ (Ipl) ಸ್ಥಾಪಕ ಹಾಗೂ ಮಾಜಿ ಆಯುಕ್ತ ಲಲಿತ್ ಮೋದಿ (Lalith Modi), 16 ವರ್ಷಗಳ ಬಳಿಕ ಭಾರತಕ್ಕೆ (India) ಮರಳುವ ನಿರ್ಧಾರ ಪ್ರಕಟಿಸಿದ್ದಾರೆ.

LALIT MODI : ಫೆಮಾ ನಿಯಮ ಉಲ್ಲಂಘನೆ ಆರೋಪ – ಲಲಿತ್ ಮೋದಿಗೆ ಬಿಗ್ ರಿಲೀಫ್!

2009ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎರಡನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾಕ್ಕೆ (South Africa) ಸ್ಥಳಾಂತರಿಸಿದ್ದಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅವರಿಗೆ ಬಹುದೊಡ್ಡ ಕಾನೂನು ಗೆಲುವು ಸಿಕ್ಕಿದೆ. 

ABHISHEK POREL : ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶ

ಬಂಗಾಳ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ (Abhishek Porel) ವಿರುದ್ಧ ದಾಖಲಾಗಿರುವ ಅತ್ಯಾಚಾರ (Sexual Harassment ) ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ತಕ್ಷಣವೇ ಬಂಧಿಸುವಂತೆ ಕಲ್ಕತ್ತಾ ಹೈಕೋರ್ಟ್ (kolkata High court )ಪೊಲೀಸರಿಗೆ ಆದೇಶಿಸಿದೆ

INTERESTING FACTS : ಫಿಫಾ ವರ್ಲ್ಡ್ ಕಪ್ ನೀಡೋ ಗೋಲ್ಡನ್ ಶೂ ಬಗ್ಗೆ ನಿಮಗೆಷ್ಟು ಗೊತ್ತು?

2026ರ ಫಿಫಾ ವಿಶ್ವಕಪ್ (Fifa World Cup)​ ಟೂರ್ನಿಗೆ ಈಗಾಗಲೇ ತೆರೆ ಬಿದ್ದಿದೆ. 2 ತಿಂಗಳು ಕಾಲ (Interesting Facts) ನಡೆದಿದ್ದ ಟೂರ್ನಿಯಲ್ಲಿ ಸ್ಪೇನ್​ ತಂಡ ಅರ್ಜೆಂಟೀನಾವನ್ನು 1-0 ಅಂತರದಿಂದ ಮಣಿಸುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

FOOTBALL : ‘ವಿಶ್ವಕಪ್ ಸೋಲಿನ ನೋವು ಮರೆಯಲು ಸಮಯ ಬೇಕು’ ಮೆಸ್ಸಿ ಭಾವುಕ ಮಾತು

ಲಿಯೊನೆಲ್ ಮೆಸ್ಸಿ (Lionel messi) ಫಿಫಾ ವಿಶ್ವಕಪ್ 2026 (FIFA Worldcup 2026) ಫೈನಲ್‌ನಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

MOHANLAL: “ಸ್ಟೇಡಿಯಂನಲ್ಲಿ ಸಖತ್ ಸೌಂಡು!..” ಫಿಫಾ ಕಪ್ ಗೆದ್ದ ಸ್ಪೇನ್ ಸಂಭ್ರಮಕ್ಕೆ ಸಾಕ್ಷಿಯಾದ ನಟ ಮೋಹನ್‌ಲಾಲ್-VIDEO

ಮಲೆಯಾಳಂ ಚಿತ್ರರಂಗದ ಹಿರಿಯ ನಟ ಹಾಗೂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal) ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ರೋಚಕ 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ.

ROHIT SHARMA : ನನ್ನ ಕೆಲಸ ಬ್ಯಾಟ್‌ನಿಂದ ಮಾತನಾಡುವುದು, ನಿವೃತ್ತಿ ವದಂತಿಗೆ ರೋಹಿತ್ ಬ್ರೇಕ್!- VIDEO

ಇಂಗ್ಲೆಂಡ್ (England) ವಿರುದ್ಧದ ಏಕದಿನ ಸರಣಿ ಸೋಲಿನ ಬೆನ್ನಲ್ಲೇ, ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ಕ್ರಿಕೆಟ್‌ ದಿಗ್ಗಜ ರೋಹಿತ್ ಶರ್ಮಾ (Rohit Sharma) ತೆರೆ ಎಳೆದಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ ರೋಹಿತ್, ಪಂದ್ಯದ ನಂತರ ಬಿಸಿಸಿಐಗೆ (BCCI) ನೀಡಿದ ಸಂದರ್ಶನದಲ್ಲಿ ಹೊರಗಿನ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

FIFA: ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ಸಾವಿರ ಕೋಟಿ ರೂ. ಬಹುಮಾನದ ಮೊತ್ತ – ಫಿಫಾ ವಿಜೇತರಿಗೆ ಸಿಗೋದೆಷ್ಟು?

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ (Argentina) ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ (Spain), 2026ರ ಫಿಫಾ ವಿಶ್ವಕಪ್ (FIFA World Cup 2026) ಮುಡಿಗೇರಿಸಿಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಸ್ಪೇನ್ ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೆ ಜಾಗತಿಕ ಫುಟ್‌ಬಾಲ್‌ನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.

FIFA: ಮೆಸ್ಸಿಗೆ ತಪ್ಪಿದ ಚಿನ್ನದ ಬೂಟು – ಪ್ರಶಸ್ತಿ ವಿಜೇತ ರಣಕಲಿಗಳ ವಿವರ ಇಲ್ಲಿದೆ

ನ್ಯೂಜೆರ್ಸಿ: ನ್ಯೂ ಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ (FIFA World Cup 2026) ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ (Argentina) ವಿರುದ್ಧ 1-0 ಅಂತರದ ಜಯ ಸಾಧಿಸಿದ ಯೂರೋಪಿಯನ್ ಚಾಂಪಿಯನ್ ಸ್ಪೇನ್ (Spain), ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

FIFA WORLD CUP: ಫಿಫಾ ವಿಶ್ವಕಪ್ ಹವಾ – ಕೇರಳ ಹಾಗೂ ಮಣಿಪುರದಲ್ಲಿ ಶಾಲೆ-ಕಾಲೇಜುಗಳಿಗೆ ಇಂದು ರಜೆ, ವಿವಿಧಡೆ ಪರೀಕ್ಷೆಗಳು ಮುಂದೂಡಿಕೆ

ಫಿಫಾ ವಿಶ್ವಕಪ್ (Fifa World Cup) 2026ರ ಫೈನಲ್ ಪಂದ್ಯದ ರೋಮಾಂಚನದ ಹಿನ್ನೆಲೆಯಲ್ಲಿ, ಸೋಮವಾರದಂದು ಅಂದರೆ ಇಂದು ಕೇರಳ (Kerala) ಮತ್ತು ಮಣಿಪುರ (Manipur)ರಾಜ್ಯಗಳಲ್ಲಿ ಶಾಲೆ ಹಾಗೂ ಕಾಲೇಜುಗಳಿಗೆ ಒಂದು ದಿನದ ರಜೆ (Govt Holiday) ಘೋಷಿಸಲಾಗಿದೆ.

FIFA 2026 : ಫೀಫಾ ವಿಶ್ವಕಪ್ 2026 – ಇತಿಹಾಸದಲ್ಲೇ ಮೊದಲ ಬಾರಿಗೆ ಅದ್ಧೂರಿ ಹಾಫ್‌ಟೈಮ್ ಶೋ!

ಫೀಫಾ ವಿಶ್ವಕಪ್ 2026ರ (FIFA 2026) ಫೈನಲ್ ಪಂದ್ಯವು ಕೇವಲ ಕ್ರೀಡಾಂಗಣದ ಕದನಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಬಾರಿ ಕ್ರೀಡೆ ಮತ್ತು ಮನರಂಜನೆಯ ಅಪರೂಪದ ಸಂಗಮಕ್ಕೆ ಜಗತ್ತು ಸಾಕ್ಷಿಯಾಗಲಿದೆ.

ROHIT SHARMA : ಲಾರ್ಡ್ಸ್‌ ನಲ್ಲಿ ಮೊತ್ತಮೊದಲ ಏಕದಿನ ಶತಕ, ಸಚಿನ್‌ ದಾಖಲೆ ಉಡೀಸ್‌ – ನಿವೃತ್ತಿ ಮಾತೆತ್ತಿದವರಿಗೆ ರೋಹಿತ್‌ ಶರ್ಮಾ ತಪರಾಕಿ!

ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊಸ ಇತಿಹಾಸ ಬರೆದಿದ್ದಾರೆ.
Change Language »
error: Content is protected !!