Sunday, July 7, 2024
Homeಚುನಾವಣೆ 2023MAHESH TENGINKAI: ಜಗದೀಶ್ ಶೆಟ್ಟರ್ ಹೇಳಿದ್ದು ನಿಜವಾಗಿದೆ: ಮಹೇಶ್ ಟೆಂಗಿನಕಾಯಿ

MAHESH TENGINKAI: ಜಗದೀಶ್ ಶೆಟ್ಟರ್ ಹೇಳಿದ್ದು ನಿಜವಾಗಿದೆ: ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ: ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದರು. ಈಗ ಅವರು ಹೇಳಿದ್ದು ನಿಜವಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ (Congress) ಹೀನಾಯ ಸೋಲಾಗಿದೆ ಎಂದು ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ವ್ಯಂಗ್ಯವಾಡಿದ್ದಾರೆ.

ನಾಲ್ಕು ರಾಜ್ಯಗಳ ಪೈಕಿ ಕಾಂಗ್ರೆಸ್ ಗೆ ಹೀನಾಯ ಸೋಲಾಗಿದೆ. ಈ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕ ಮಹೇಶ್ ತೆಂಗಿನಕಾಯಿ, ಸೋಲಿನ ಬಗ್ಗೆ ಜಗದೀಶ್ ಶೆಟ್ಟರ್ ಮೊದಲೆ ಮಾತಾಡಿದ್ದರು. ಹುಬ್ಬಳ್ಳಿ- ಧಾರವಾಡ (Hubballi-Dharwad) ಕೇಂದ್ರ ಕ್ಷೇತ್ರದಲ್ಲಿ ಶೆಟ್ಟರ್ ಹೀನಾಯವಾಗಿ ಸೋತಿದ್ದರು. ತಮ್ಮ ಭೂತ್​ ನಲ್ಲಿಯೇ ಕಡಿಮೆ ಮತಗಳನ್ನು ಪಡೆದಿದ್ದರು ಎಂದಿದ್ದಾರೆ.

ಶೆಟ್ಟರ್ ಮೊದಲು ಕಾಂಗ್ರೆಸ್ ಮುಳಗೋ ಹಡಗು ಅಂದಿದ್ದರು. ಈಗ ಅವರೇ ಮುಳುಗುವ ಹಡಗು ಹತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಕೂಡ ಮುಳುಗಿಸುತ್ತಿದ್ದಾರೆ. ಲೀಡರ್‌ ಲೆಸ್‌ ಪಾರ್ಟಿ ಅಂದವರು ಈಗ ಏನಂತಾರೆ? ಲೀಡರ್ ಲೆಸ್ ಪಾರ್ಟಿ ಅನ್ನೋದು ಯಾವದೂ ಗೊತ್ತಾಯ್ತಾ? ಲಿಂಗಾಯತರ ಹೆಸರಲ್ಲಿ ರಾಜಕೀಯ ಮಾಡಲು ಹೋಗಿ ಸೋತಿದ್ದಾರೆ ಎಂದರು.

ಜಗದೀಶ್ ಶೆಟ್ಟರ್ ಹೆಸರು ಈಗ ಎಲ್ಲಿಯೂ ನಡೆಯಲ್ಲ. ಶೆಟ್ಟರ್ ವಾಪಸ್ ಬಿಜೆಪಿಗೆ ಬರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ತತ್ವ ಸಿದ್ದಾಂತ ಒಪ್ಪಿ ಬರೋರಿಗೆ ಸ್ವಾಗತ. ಈ ಮೊದಲು ಕಾಂಗ್ರೆಸ್​ನಲ್ಲಿ ಮನೆಯೊಂದು ಮೂರು ಬಾಗಿಲಿತ್ತು. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್​ ನಲ್ಲಿ ಎಷ್ಟು ಬಾಗಿಲು ಆಗತ್ತೆ ಕಾದು ನೋಡಬೇಕು. ಫಲಿತಾಂಶದ ಎಫೆಕ್ಟ್ ಕರ್ನಾಟಕದ (Karnataka) ಮೇಲೆ ತಟ್ಟುತ್ತದೆ. ಎಪ್ರಿಲ್, ಮೇ ವೇಳೆಗೆ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂದರು.

ಹೆಚ್ಚಿನ ಸುದ್ದಿ