Sunday, July 7, 2024
Homeಟಾಪ್ ನ್ಯೂಸ್ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂತಾರೆ?

ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂತಾರೆ?

ಬೆಂಗಳೂರು: ಹಿಂದಿನ ಸರ್ಕಾರದಲ್ಲಿ ಆದ ಪಠ್ಯಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರದ ಪ್ರತಿಕ್ರಿಯೆ ನೀಡಿದ್ದು, ಅವಶ್ಯಕತೆ ಇದ್ದರೆ ಮಾತ್ರ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಉಲ್ಲೇಖ ಮಾಡಿದ್ದೇವೆ. ಅದರಂತೆ ಅವಶ್ಯಕತೆ ಇದ್ದರೆ ಮಾತ್ರ ಪಠ್ಯ ಪರಿಷ್ಕರಣೆ ಮಾಡಲಾಗುವುದು. ಕಳೆದ ಸರ್ಕಾರದಲ್ಲಿ ಆದ ಗೊಂದಲಗಳ ಬಗ್ಗೆ ನಾನು ಹೊಣೆಗಾರನಾಗುವುದಿಲ್ಲ. ಮಕ್ಕಳಿಗೆ ತೊಂದರೆಯಾಗದಂತೆ ಪಠ್ಯ ಪರಿಷ್ಕರಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಜತೆ ಸಭೆ ನಡೆಸಿ, ಕಮಿಟಿ ರಚಿಸಿ ಪಠ್ಯಪುಷ್ಕರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೇ, ನಾಳೆಯಿಂದ ರಾಜ್ಯದಂತ ಶಾಲೆಗಳು ಪ್ರಾರಂಭವಾಗಲಿದೆ. ನಾಳೆ ಶಿವಮೊಗ್ಗ ಗ್ರಾಮಾಂತರದ ಒಂದು ಶಾಲೆಯಲ್ಲಿ ಸ್ವತಃ ನಾನೇ ಹೋಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಉತ್ತಮ ಶಿಕ್ಷಣಕ್ಕೆ ಕಾಂಗ್ರೆಸ್ ಬದ್ಧ

ಪಠ್ಯ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಕ್ಕಳಿಗೆ ಉತ್ತಮವಾದ ಶೈಕ್ಷಣಿಕ ಭವಿಷ್ಯ ರೂಪಿಸಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ. ಹಿಂದಿನ ಪಠ್ಯಗಳನ್ನೇ ಮುಂದುವರಿಸುವ ಜನರ ಬೇಡಿಕೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಲಿದೆ. ನಾಡು, ನುಡಿಗೆ, ಮಹನೀಯರಿಗೆ ಅವಮಾನಿಸಿದ ದೋಷಪೂರಿತ ಪಠ್ಯವನ್ನು ಮುಂದುವರೆಸುವುದಿಲ್ಲ ಎಂದು ಹೇಳಿದೆ.

ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ನಾವು ಸರಿಪಡಿಸುತ್ತೇವೆ. ಇತಿಹಾಸ ಪುರುಷರನ್ನೇ ಅವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಈ ತಪ್ಪು ತಿದ್ದಬೇಕು ತಾನೆ? ಅವರು ಬರೆದಿದ್ದೇ ಇತಿಹಾಸವಲ್ಲ. ವಾಸ್ತವವನ್ನು ಪಠ್ಯದಲ್ಲಿ ಸೇರಿಸಲಿದ್ದೇವೆ. ಸತ್ಯ ಅಲ್ಲದ್ದನ್ನು ತೆಗೆದು ಹಾಕುತ್ತೇವೆ. ನಾವು ಚುನಾವಣೆಗೂ ಮುಂಚಿನಿಂದಲೇ ಈ ವಿಷಯವನ್ನು ಹೇಳುತ್ತಾ ಬಂದಿದ್ದೇವೆ. ಈಗ ಅದನ್ನು ಕಾರ್ಯ ರೂಪಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ