Sunday, July 7, 2024
Homeಟಾಪ್ ನ್ಯೂಸ್WEDDING IN TRAIN : ಅರಮನೆ ಬಿಟ್ಹಾಕಿ..! : ಐಷಾರಾಮಿ ರೈಲಿನಲ್ಲಿ ಮದುವೆಯಾಗಿ!

WEDDING IN TRAIN : ಅರಮನೆ ಬಿಟ್ಹಾಕಿ..! : ಐಷಾರಾಮಿ ರೈಲಿನಲ್ಲಿ ಮದುವೆಯಾಗಿ!

ರಾಜಸ್ಥಾನ : ಜೀವನದ ಸುಂದರ ಘಟ್ಟವಾದ ದಾಂಪತ್ಯ ಬದುಕಿಗೆ ಕಾಲಿಡುವಾಗ ರಾಜ ರಾಣಿಯಂತೆ ಅರಮನೆಯಲ್ಲಿ ಮದುವೆಯಾಗಬೇಕು ಎಂದು ಆಸೆ ಪಡುವವರಿದ್ದಾರೆ. ಅಂಥವರು ರಾಜಾಸ್ಥಾನದ ಜೈಪುರ.. ಉದಯಪುರದ ಅರಮನೆಗಳನ್ನು ಆಯ್ದುಕೊಳ್ತಾರೆ.. ಇದಕ್ಕೆ ಬಹಳ ಡಿಮ್ಯಾಂಡ್‌ ಕೂಡಾ ಇದೆ.

ಆದರೆ ಇದೀಗ ಅರಮನೆಯಲ್ಲಿ ಮದುವೆಯಾಗುವ ಬದಲು ಐಷಾರಾಮಿ ರೈಲಿನಲ್ಲಿ ಮದುವೆಯಾಗುವ ಅವಕಾಶವನ್ನು ರೈಲ್ವೇ ಇಲಾಖೆ ಕಲ್ಪಿಸಿದೆ

ಜೈಪುರದ ಅರಮನೆಗಳಲ್ಲಿ ಸಿನಿಮೀಯ ರೀತಿಯಾಗಿ ಮದುವೆಯಾಗಬೇಕು ಎಂಬ ಕನಸು ಕಾಣುತ್ತಿರುವವರಿಗೆ ರೈಲ್ವೆ ಇಲಾಖೆ ಬಂಪರ್ ಆಫರ್ ನೀಡಿದ್ದು, ಇದೀಗ ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳ ನಡುವೆ ಚಲಿಸುವ ರೈಲಿನಲ್ಲಿ ಮದುಮಕ್ಕಳು ವಿವಾಹ ಮಾಡಿಕೊಳ್ಳಬಹುದಾಗಿದೆ

ಮದುವೆಯ ಜೊತೆಗೆ ರಾಜಸ್ಥಾನದ ಅರಮನೆಯ ನಗರಿಗಳ ಮನಸೂರೆಗೊಳ್ಳುವ ನೋಟವನ್ನೂ ಕಣ್ತುಂಬಿಕೊಳ್ಳಬಹುದಾಗಿದೆ.40 ವರ್ಷದ ಇತಿಹಾಸವಿರುವ ಪ್ಯಾಲೇಸ್‌ ಆನ್‌ ವೀಲ್ಸ್ ರೈಲಿನಲ್ಲಿ ಮದುವೆಗಳಿಗೆ ಅವಕಾಶ ನೀಡಲಾಗಿದ್ದು ಚಲಿಸುವ ರೈಲಿನಲ್ಲಿ ಮದುವೆಯ ಎಲ್ಲಾ ಸಂಪ್ರದಾಯಗಳನ್ನು ನೆರವೇರಿಸಬಹುದಾಗಿದೆ.

150 ರೈಲು ಕ್ಯಾಬಿನ್‌ಗಳನ್ನೊಳಗೊಂಡ ರೈಲಿನಲ್ಲಿ ಮದುವೆ ನಡೆಸಲು ಅನುಕೂಲ ಕಲ್ಪಿಸಲಾಗಿದ್ದು ಈ ವರ್ಷಾಂತ್ಯದಲ್ಲಿ ಕನಿಷ್ಠ ಐದು ಮದುವೆಗಳು ನಡೆಯಲಿವೆ ಎಂಬ ನಿರೀಕ್ಷೆಯನ್ನು ರೈಲ್ವೆ ಇಲಾಖೆ ಹೊಂದಿದೆ.

ರಾಜಸ್ಥಾನದ ಜೈಪುರ, ಸವೈ ಮದೊಪುರ್, ಚಿತ್ತೋರ್ಗಢ್, ಜೈಸಲ್ಮೇರ್, ಜೋಧ್ಪುರ್, ಭರತ್ಪುರ್ ಮತ್ತು ಅಗ್ರಾಗೆ ಸಂಚರಿಸುವ ಈ ಗಾಲಿ ಮೇಲಿನ ಅರಮನೆ ರೈಲು ಕೊನೆಯದಾಗಿ ದೆಹಲಿಯಲ್ಲಿ ನಿಲ್ಲಲಿದೆ.

ಪ್ಯಾಲೇಸ್ ಆನ್ ವ್ಹೀಲ್ಸ್‌ನ ನಿರ್ದೇಶಕರಾಗಿರುವ ಪ್ರದೀಪ್ ಬೋಗ್ರಾ ಮಾತನಾಡಿ, ಮದುವೆ ಮಾಡಿಕೊಳ್ಳಲು ಇಚ್ಛಿಸುವವರು ಎಷ್ಟು ಕೋಚ್ ಬುಕ್‌ ಮಾಡ್ತಾರೆ ಹಾಗೂ ಎಷ್ಟು ದೂರ ಸಂಚರಿಸುತ್ತಾರೆ ಎಂಬುದರ ಮೇಲೆ ದರ ನಿಗಧಿ ಮಾಡಲು ತೀರ್ಮಾನಿಸಲಾಗಿದೆ ಎಂದರು

ಆದಾಯ ವೃದ್ಧಿಗಾಗಿ ರೈಲ್ವೇ ಇಲಾಖೆ ಹೊಸದೊಂದು ಐಡಿಯಾ ಮಾಡಿದ್ದು ಪ್ರಸ್ತುತ ಈ ಪ್ಯಾಲೇಸ್‌ ಆನ್‌ ವೀಲ್ಸ್ ದೇಶದಲ್ಲೇ ಅತ್ಯಂತ ದುಬಾರಿ ರೈಲು ಪ್ರಯಾಣ ದರ ಹೊಂದಿದೆ. ಸದ್ಯ ಓರ್ವ ವ್ಯಕ್ತಿ ಈ ರೈಲಿನಲ್ಲಿ ಪ್ರಯಾಣಿಸಬೇಕಾದ್ರೆ 1 ಲಕ್ಷ ರೂ. ಖರ್ಚಾಗಲಿದೆ. ಇನ್ನು ಮದುವೆಗೆ ತಂಡೋಪತಂಡವಾಗಿ ಜನ ಆಗಮಿಸೋದ್ರಿಂದ ಹೆಚ್ಚು ಮೊತ್ತ ಸಂಗ್ರಹವಾಗಲಿದ್ದು ಇದು ರೈಲ್ವೇ ಇಲಾಖೆಗೆ ಹೆಚ್ಚಿನ ಆದಾಯ ತರುವ ನಿರೀಕ್ಷೆ ಇದೆ.

ಹೆಚ್ಚಿನ ಸುದ್ದಿ