Sunday, July 7, 2024
Homeಚುನಾವಣೆ 2023Assembly elections: ಜನಾದೇಶ ಸ್ವೀಕರಿಸುತ್ತೇವೆ, ಸೈದ್ಧಾಂತಿಕ ಯುದ್ಧ ಮುಂದುವರಿಯುತ್ತದೆ: ರಾಹುಲ್ ಗಾಂಧಿ

Assembly elections: ಜನಾದೇಶ ಸ್ವೀಕರಿಸುತ್ತೇವೆ, ಸೈದ್ಧಾಂತಿಕ ಯುದ್ಧ ಮುಂದುವರಿಯುತ್ತದೆ: ರಾಹುಲ್ ಗಾಂಧಿ

ನವದೆಹಲಿ: ಇಂದು ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Assembly Elections 2023) ಪ್ರಕಟವಾಗಿದ್ದು, ಕಾಂಗ್ರೆಸ್ (Congress) ತೆಲಂಗಾಣದಲ್ಲಿ (Telangana) ಜಯಭೇರಿ ಭಾರಿಸಿದೆ. ಉಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಜನಾದೇಶವನ್ನು ಸ್ವೀಕರಿಸುತ್ತೇವೆ. ಸೈದ್ಧಾಂತಿಕ ಯುದ್ಧ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ (X) ಬರೆದುಕೊಂಡಿರುವ ರಾಹುಲ್ ಗಾಂಧಿ, ”ಮಧ್ಯಪ್ರದೇಶ್ (madhya pradesh), ಛತ್ತೀಸ್ ​ಗಡ್ (Chattigarh) ಮತ್ತು ರಾಜಸ್ಥಾನ್ (Rajasthan) ರಾಜ್ಯಗಳಲ್ಲಿ ಜನಾದೇಶವನ್ನು ನಾವು ಸ್ವೀಕರಿಸುತ್ತೇವೆ. ಆದರೆ, ಸೈದ್ಧಾಂತಿಕ ಸಮರ ಮುಂದುವರಿಯುತ್ತದೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.

ಪ್ರಜೆಗಳಿಗೆ ನೀಡಿದ ಭರವಸೆಯನ್ನು ಹಾಗೂ ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ