Sunday, July 7, 2024
Homeಟಾಪ್ ನ್ಯೂಸ್VISHNU IDOL : ಉತ್ಖನನದ ವೇಳೆ ಪತ್ತೆಯಾಯ್ತು ಅಪರೂಪದ ವಿಷ್ಣು ವಿಗ್ರಹ!

VISHNU IDOL : ಉತ್ಖನನದ ವೇಳೆ ಪತ್ತೆಯಾಯ್ತು ಅಪರೂಪದ ವಿಷ್ಣು ವಿಗ್ರಹ!

ಮಹಾರಾಷ್ಟ್ರ : ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ ವಿಗ್ರಹವೊಂದು ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ
ಪತ್ತೆಯಾಗಿದೆ.

ಲಖುಜಿ ಜಾಧವರಾವ್ ಮಹಾರಾಜ್‌ ಅವರ ಛತ್ರಿ ಅಂದರೆ ಸಭಾಮಂಟಪವನ್ನು ಪತ್ತೆ ಮಾಡಲು ಉತ್ಖನನ ಮಾಡುವ ವೇಳೆ ಈ ವಿಗ್ರಹ ಪತ್ತೆಯಾಗಿದೆ.

ಪರಿಶೀಲನೆ ನಡೆಸುವಾಗ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹ ಪತ್ತೆಯಾಗಿದೆ ನಂತರ ಶೇಷಶಾಯಿ ವಿಷ್ಣುವಿನ ಬೃಹತ್‌ ವಿಗ್ರಹ ಪತ್ತೆಯಾಗಿದೆ ಎಂದು ನಾಗ್ಪುರದ ಪುರಾತತ್ವಶಾಸ್ತ್ರಜ್ಞ ಅರುಣ್‌ ಮಲಿಕ್‌ ತಿಳಿಸಿದ್ದಾರೆ.

ಈ ವಿಗ್ರಹ 1.70 ಮೀಟರ್ ಉದ್ದ ಮತ್ತು 1 ಮೀಟರ್ ಎತ್ತರವಿದ್ದು, ತಳಹದಿಯ ಅಗಲವು 30 ಸೆಂಟಿಮೀಟರ್ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

‘ಈ ಶಿಲ್ಪವು ಕ್ಲೋರೈಟ್ ಶಿಸ್ಟ್ ಶಿಲೆಯಿಂದ ತಯಾರು ಮಾಡಲಾಗಿದ್ದು, ಈ ಪ್ರಕಾರದ ಶಿಲ್ಪಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೊಯ್ಸಳು ತಯಾರಿಸುತ್ತಿದ್ದರು. ಹೀಗಾಗಿ ಇದು ಹೊಯ್ಸಳರ ಕಾಲದ್ದೇ ಇರಬೇಕು ಎಂದು ಅಂದಾಜಿಸಲಾಗಿದೆ

ಈ ವಿಗ್ರಹದಲ್ಲಿ ವಿಷ್ಣು, ಶೇಷನಾಗನ ಮೇಲೆ ಮಲಗಿರುವ ಮುದ್ರೆಯಲ್ಲಿದ್ದು, ಲಕ್ಷ್ಮಿಯು ಕುಳಿತು ವಿಷ್ಣುವಿನ ಪಾದಗಳನ್ನು ಒತ್ತುತ್ತಿರುವ ದೃಶ್ಯವಿದೆ. ವಿಗ್ರಹದ ಸುತ್ತಲೂ ವಿಷ್ಣು ದಶಾವತಾರ, ಸಮುದ್ರಮಂಥನವನ್ನು ಚಿತ್ರಿಸಲಾಗಿದೆ. ಸಮುದ್ರಮಂಥನದ ಅಶ್ವ, ಐರಾವತ ಮುಂತಾದವುಗಳೂ ವಿಗ್ರಹದ ಮೇಲೆ ಕಾಣಸಿಗುತ್ತವೆ’ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ

ಹೆಚ್ಚಿನ ಸುದ್ದಿ