Sunday, July 7, 2024
Homeಟಾಪ್ ನ್ಯೂಸ್Viral video : ಪೆಟ್ರೋಲ್ ಬಂಕ್‌ನಲ್ಲಿ ಕೆಲಸ : ಇಳಿ ವಯಸ್ಸಿನಲ್ಲೂ ಅಜ್ಜಿಯ ಸ್ವಾಭಿಮಾನದ ಬದುಕು..ವಿಡಿಯೋ..

Viral video : ಪೆಟ್ರೋಲ್ ಬಂಕ್‌ನಲ್ಲಿ ಕೆಲಸ : ಇಳಿ ವಯಸ್ಸಿನಲ್ಲೂ ಅಜ್ಜಿಯ ಸ್ವಾಭಿಮಾನದ ಬದುಕು..ವಿಡಿಯೋ..

ಬೆಂಗಳೂರು : ವಯಸ್ಸು 30 ದಾಟಿದರೂ ಪೋಷಕರ ದುಡಿಮೆ ಮೇಲೆ ಅವಲಂಬನೆಯಾಗಿರುವ ಸಾಕಷ್ಟು ಯುವಕ-ಯುವತಿಯರಿದ್ದಾರೆ. ಇಂತಹವರ ನಡುವೆ ಇಲ್ಲೊಬ್ಬಳು ಅಜ್ಜಿ ತನ್ನ ಇಳಿ ವಯಸ್ಸಿನಲ್ಲಿಯೂ ಯುವ ಜನತೆ ನಾಚಿಸುವಂತೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾಳೆ.

ಹೌದು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಈ ಅಜ್ಜಿ ಪೆಟ್ರೋಲ್ ಬಂಕ್‌ನಲ್ಲಿ ನಿತ್ಯ ಕೆಲಸ ಮಾಡುತ್ತಿದ್ದಾಳೆ. ಈಕೆಗೆ 60 ವರ್ಷ. ಇಂತಹ ಇಳಿ ವಯಸ್ಸಿನಲ್ಲಿಯೂ ಛಲ ಬಿಡದೇ ಕೆಲಸ ಮಾಡುತ್ತಿದ್ದಾರೆ. ಇವರ ಹೆಸರು ಹಾಗೂ ಊರು ಯಾವುದು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಈ ಛಲಗಾತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದುಡಿಮೆ ಮಾಡಲು, ಸ್ವಂತ ಕಾಲಿನ ಮೇಲೆ ನಿಲ್ಲಲು ಯಾವುದೇ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಈ ಅಜ್ಜಿ ಸಾಕ್ಷಿಯಾಗಿದ್ದಾಳೆ. ಈ ವೃದ್ಧೆಯ ಸ್ವಾಭಿಮಾನದ ಬದುಕಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ