Sunday, July 7, 2024
Homeಟಾಪ್ ನ್ಯೂಸ್Donald trump : ಪುಟಿನ್‌ ಒಬ್ಬ ವಾರ್‌ ಕ್ರಿಮಿನಲ್‌, ನಾನು ಅಧ್ಯಕ್ಷನಾದರೆ ಕ್ರಮ ಖಂಡಿತ -...

Donald trump : ಪುಟಿನ್‌ ಒಬ್ಬ ವಾರ್‌ ಕ್ರಿಮಿನಲ್‌, ನಾನು ಅಧ್ಯಕ್ಷನಾದರೆ ಕ್ರಮ ಖಂಡಿತ – ಡೋನಾಲ್ಡ್‌ ಟ್ರಂಪ್‌ ಗುಡುಗು!

ಅಟ್ಲಾಂಟ: ಅಮರಿಕ ಅಧ್ಯಕ್ಷೀಯ ಚುನಾವಣೆ ರಂಗೇರುತ್ತಿದ್ದು ಪ್ರಮುಖ ನಾಯಕರಾದ ಡೋನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ತಮ್ಮ ವಿದೇಶಾಂಗ ನೀತಿಯ ಮಾತುಗಳನ್ನಾಡಿ ಜನ ಮತ ಪಡೆಯಲು ಮುಂದಾಗಿದ್ದಾರೆ. ನಾನು ಕಚೇರಿಗೆ ತೆರಳುವ ಮುನ್ನ ರಷ್ಯಾ- ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರೆ, ಬೈಡೆನ್, ಪುಟಿನ್ ಅವರು ಯುದ್ಧ ಪಿಪಾಸು ಎಂದು ಜರಿದಿದ್ದಾರೆ.

ಖಾಸಗಿ ವಾಹಿನಿ ಪ್ರಸಾರ ಮಾಡಿದ ಸಂದರ್ಶನದಲ್ಲಿ ಅವರಿಬ್ಬರು ಈ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಆಫ್ಘಾನಿಸ್ತಾನ ಕುರಿತ ಪುಟಿನ್ ನೀತಿ ಕೆಟ್ಟದ್ದು. ಆತ ಎಂದಿಗೂ ಉಕ್ರೇನ್‌ ಬಗ್ಗೆ ಚಿಂತಿಸಲಿಲ್ಲ. ಉಕ್ರೇನ್‌ ಅನ್ನು ಆಕ್ರಮಿಸಿದ. ಇರಾನ್‌ ಜೊತೆಗೂ ನಮಗೆ ಯಾವ ವ್ಯವಹಾರವೂ ಬೇಡ. ಪುಟಿನ್ ಆಕ್ರಮಣಕಾರಿ ನೀತಿಯಿಂದಾಗಿ ವಿಶ್ವವೇ ತಲ್ಲಣಿಸುತ್ತಿದೆ ಎಂದರು.

ಇನ್ನು ಹಾಲಿ ಅಧ್ಯಕ್ಷ ಜೋ ಬೈಡೆನ್ ಮಾತನಾಡಿ, ರಷ್ಯಾ ಈಗಾಗಲೇ ಹಲವು ಯೋಧರನ್ನು ಕಳೆದುಕೊಂಡಿದೆ. ಆದರೂ ಉಕ್ರೇನ್‌ನ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಪುಟಿನ್ ಕೇವಲ ಐದು ದಿನಗಳಲ್ಲಿ ಕೈವ್ ನಗರವನ್ನು ವಶಪಡಿಸಿಕೊಳ್ಳುತ್ತೇವೆ ಎಂದಿದ್ದರು. ಏಕೆಂದರೆ ಅದು ಸೋವಿಯತ್ ಒಕ್ಕೂಟದ ಒಂದು ಭಾಗ ಎಂದು ಸಮರ್ಥಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಅಮರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿ ಇವರಿಬ್ಬರನ್ನು ಮುಖಾಮುಖಿಯಾಗಿಸಿತ್ತು. ಆ ಸಂದರ್ಶನದಲ್ಲಿ ಇವರಿಬ್ಬರು ಮಾತನಾಡಿದ್ದರು.

ಹೆಚ್ಚಿನ ಸುದ್ದಿ