Sunday, July 7, 2024
Homeಟಾಪ್ ನ್ಯೂಸ್Tour to Space: ಬಾಹ್ಯಾಕಾಶ ಪ್ರವಾಸಕ್ಕೆ ಭಾರತೀಯರಿಗೆ ಅವಕಾಶ!

Tour to Space: ಬಾಹ್ಯಾಕಾಶ ಪ್ರವಾಸಕ್ಕೆ ಭಾರತೀಯರಿಗೆ ಅವಕಾಶ!

ನವ ದೆಹಲಿ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ದೇಶವು ನಮ್ಮ ಪಾಲುದಾರ ರಾಷ್ಟ್ರವಾಗಿದೆ ಎಂದು ಯುಎಸ್ ಮೂಲದ ಸೇರಾ (SERA) ಬ್ಲೂ ಒರಿಜಿನ್ ಸಂಸ್ಥೆ ಘೋಷಿಸಿದೆ. ಅಲ್ಲದೆ ಇದಕ್ಕೆ “ಡೆಮಾಕ್ರಸಿ ಸ್ಪೇಸ್” ಎಂದು ನಾಮಕರಣ ಮಾಡುವ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಿದೆ.

ಸೇರಾ ಸಂಸ್ತೆ ಘೋಷಿಸಿದ ಈ ಬ್ಲೂ ಒರಿಜಿನ್ ಬಾಹ್ಯಾಕಾಶ ಯಾನದಲ್ಲಿ ಭಾರತೀಯರಿಗೆ ಸ್ಥಾನ ನೀಡಲಾಗುವುದು. ಈ ಯಾನವು 11 ನಿಮಿಷದ್ದಾಗಿರುತ್ತದೆ. ಇದು ಕಾರ್ಮೆನ್ ಗಡಿಯಾಚೆಗೆ ಕರೆದೊಯ್ಯಲಾಗುತ್ತದೆ. ಇದು ಭೂಭಾಗದ 100 ಕಿ.ಮೀ. ದೂರದಲ್ಲಿರುವ ಸ್ಪೇಸ್‌ನ ಗಡಿ ಭಾಗ ಎಂದು ವಿಶ್ವ ಮಾನ್ಯ ಪಡೆದಿರುವ ಸ್ಥಳದವರಿಗೆ ಪ್ರಯಾಣಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಭಾರತೀಯರನ್ನು ಒಳಗೊಂಡಂತೆ ಒಟ್ಟು ಆರು ಮಂದಿ ಇರಲಿದ್ದಾರೆ. ಈ ಪ್ರಯಾಣಿಕರಿಗೆ ಚಂದ್ರನ ಮೇಲೆ ತೂಕವಿಲ್ಲದಂತೆ ಆಗುವ ಅನುಭವವನ್ನು ಇಲ್ಲಿಯೂ ಅನುಭವಿಸಲಿದ್ದಾರೆ.

ಸೇರಾದ ಸಹ ಸಂಸ್ಥಾಪಕ ಜೋಶುವಾ ಸ್ಕುರ್ಲಾ, ನಾವೂ ಭಾರತಿಯರ ಜೊತೆ ಬಾಹ್ಯಾಕಾಶಯಾನವನ್ನು ಕೈಗೊಂಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ತಕ್ತ ಪಡಿಸಿದ್ದಾರೆ.

ಹೆಚ್ಚಿನ ಸುದ್ದಿ