Sunday, July 7, 2024
Homeಚುನಾವಣೆ 2023TELANGANA ELECTION : ತೆಲಂಗಾಣದಲ್ಲಿ ಕಾಂಗ್ರೆಸ್‌ ರಾಜ್ಯಭಾರ - ಮಕಾಡೆ ಮಲಗಿದ ಬಿಆರ್‌ಎಸ್‌

TELANGANA ELECTION : ತೆಲಂಗಾಣದಲ್ಲಿ ಕಾಂಗ್ರೆಸ್‌ ರಾಜ್ಯಭಾರ – ಮಕಾಡೆ ಮಲಗಿದ ಬಿಆರ್‌ಎಸ್‌

ತೆಲಂಗಾಣ : ತೆಲಂಗಾಣ ರಾಜ್ಯದಲ್ಲಿ(Telangana) ಕಾಂಗ್ರೆಸ್‌ (Congress)ಅಧಿಕಾರ ಸ್ಥಾಪಿಸಿದೆ. ಮತ ಎಣಿಕೆ ಆರಂಭದಿಂದಲೂ ಉತ್ತಮ ಮುನ್ನಡೆ ಸಾಧಿಸುತ್ತಲೇ ಮ್ಯಾಜಿಕ್‌ ನಂಬರ್‌ 60 ದಾಟಿ ಸ್ಪಷ್ಟ ಬಹುಮತದೊಂದಿಗೆ ತೆಲಂಗಾಣ ರಾಜ್ಯಕ್ಕೆ ದಶಕಗಳ ಬಳಿಕ ಕಾಂಗ್ರೆಸ್‌ ಅಧಿಕಾರ ಸಿಕ್ಕಿದೆ.

2023ರ ವಿಧಾನಸಭಾ ಚುನಾವಣೆ ಫಲಿತಾಂಶ ಹೇಗಿದೆ?

ತೆಲಂಗಾಣ-ಚುನಾವಣೆ

ತೆಲಂಗಾಣ ರಾಜ್ಯ ನಿರ್ಮಾಣದ ಬಳಿಕ 2 ಬಾರಿ ಕೆ ಚಂದ್ರಶೇಖರ್ ರಾವ್‌ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷ ಅಧಿಕಾರದ ಗದ್ದುಗೆ ಏರಿತ್ತು. ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳು ಬಿಆರ್‌ಎಸ್‌ ಸೇರಿ ಸಂಚಲನ ಮೂಡಿಸಿದ್ದರು. ಹೀಗಾಗಿ ಈ ಬಾರಿ ಭಾರಿ ಯೋಜನೆಗಳ ಮೂಲಕ ಕಾಂಗ್ರೆಸ್‌ ಶತಾಯಗತಾಯ ಅಧಿಕಾರ ಹಿಡಿಯಲು ಪ್ರಯತ್ನಿಸಿದ್ದು, ಈ ಪ್ರಯತ್ನ ಯಶಸ್ಸು ಕಂಡಿದೆ. ಕಾಂಗ್ರೆಸ್‌ ಪವರ್‌ ಫುಲ್‌ ಪ್ಲೇಗೆ ಬಿಆರ್‌ಎಸ್‌ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.

ಕಾಂಗ್ರೆಸ್‌ ಬಹು ಬೇಗ ಮ್ಯಾಜಿಕ್‌ ನಂಬರ್‌ ತಲುಪಿ ಮತಎಣಿಕೆ ಆರಂಭವಾದ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮುನ್ಸೂಚನೆ ನೀಡಿತ್ತು. ಕೊನೆ ಹಂತದಲ್ಲಿ ಕಾಂಗ್ರೆಸ್‌ 119 ಕ್ಷೇತ್ರಗಳಲ್ಲಿ 64 ಕ್ಷೇತ್ರಗಳನ್ನು ಗೆದ್ದು ತೆಲಂಗಾಣದಲ್ಲಿ ಹೊಸ ಅಲೆ ಎಬ್ಬಿಸಿದೆ.

 

ಇನ್ನು ಬಿಜೆಪಿ ಅಬ್ಬರದ ಪ್ರಚಾರದ ನಡುವೆಯೂ 8 ಕಡೆ ಮಾತ್ರ ಗೆಲ್ಲುವಲ್ಲಿ ಸಫಲವಾಗಿದ್ದು ಅಸಾದುದ್ದಿನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 7 ಕ್ಷೇತ್ರ ತನ್ನದಾಗಿಸಿಕೊಂಡಿದೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹಾಲಿ ಸಿಎಂ ಕೆಸಿಆರ್‌ ತವರು ಕ್ಷೇತ್ರ ಗಜ್ವೇಲ್‌ ಗೆದ್ದರಾದರೂ ಕಾಮಾರೆಡ್ಡಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವಿ ರಮಣ ರೆಡ್ಡಿ ವಿರುದ್ಧ ಕೆಸಿಆರ್‌ ಹಾಗೂ ರೇವಂತ ರೆಡ್ಡಿ ಇಬ್ಬರೂ ಸೋಲು ಕಂಡಿದ್ದಾರೆ.  ಇನ್ನು ರೇವಂತ ರೆಡ್ಡಿ ಕೊಡಂಗಲ್‌ನಲ್ಲಿ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ. ಇನ್ನು ಬಿಜೆಪಿಯ ಪ್ರಮುಖ ಅಭ್ಯರ್ಥಿ ಬಂಡಿ ಸಂಜಯ್‌ ಕರೀಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ. ಕೆಸಿಆರ್‌ ಪುತ್ರ ಸಿರ್ಸಿಲಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಸೋಲಿನ ಬಳಿಕ ಕೆಸಿಆರ್‌ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ ರೆಡ್ಡಿ ಸಿಎಂ ಗದ್ದುಗೆ ಏರಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ.

 

 

 

ಹೆಚ್ಚಿನ ಸುದ್ದಿ