Sunday, July 7, 2024
Homeಕ್ರೀಡೆDAVID JOHNSON : ಕಟ್ಟಡದಿಂದ ಜಿಗಿದು ಕ್ರಿಕೆಟಿಗ ಆತ್ಮಹತ್ಯೆ!

DAVID JOHNSON : ಕಟ್ಟಡದಿಂದ ಜಿಗಿದು ಕ್ರಿಕೆಟಿಗ ಆತ್ಮಹತ್ಯೆ!

ಬೆಂಗಳೂರು : ಮನೆಯ ಬಾಲ್ಕಿನಿಯಿಂದ ಜಿಗಿದು ಮಾಜಿ ಕ್ರಿಕೆಟಿಗೆ ಡೇವಿಡ್ ಜಾನ್ಸನ್​​​​ (52) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ಭಾರತದ ಫಾಸ್ಟ್ ಬೌಲರ್ ಎಂಬ ಖ್ಯಾತಿ ಗಳಿಸಿದ್ದ ಜಾನ್ಸನ್ ತಮ್ಮ ಸ್ವಂತ ಮನೆಯ ಬಾಲ್ಕನಿಂದು ಹಾರಿ ಪ್ರಾಣ ಬಿಟ್ಟಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದರಿಂದ ಮನನೊಂದು ಅವರು ತಮ್ಮ ಅಪಾರ್ಟ್​​​ಮೆಂಟ್​​ನ ಮನೆಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಸಚಿನ್​​​ ತೆಂಡೂಲ್ಕರ್​ ಅವರಿಗೆ ಜಾನ್ಸನ್​​ ಫೇವರಿಟ್​​​ ಬಾಲರ್​​ ಆಗಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ. 1996ರಲ್ಲಿ ಡೇವಿಡ್ ಭಾರತ ಪರ ಟೆಸ್ಟ್​​ ಮ್ಯಾಚ್​​ ಆಡಿದ್ದರು. ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದ ಅವರು ಕುಡಿತದ ಚಟಕ್ಕೆ ಒಳಗಾಗಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಹೆಚ್ಚಿನ ಸುದ್ದಿ