Sunday, July 7, 2024
Homeಕ್ರೀಡೆT20 World Cup : ಸೆಮಿಗೆ ಅಫ್ಘಾನ್‌ ಲಗ್ಗೆ : ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದೇಕೆ ತಾಲಿಬಾನ್‌...

T20 World Cup : ಸೆಮಿಗೆ ಅಫ್ಘಾನ್‌ ಲಗ್ಗೆ : ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದೇಕೆ ತಾಲಿಬಾನ್‌ ?

ಅಫ್ಘಾನಿಸ್ತಾನ : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ತಂಡ ಪ್ರವೇಶಿಸಿದ್ದಕ್ಕೆ ತಾಲಿಬಾನಿಗಳು ಭಾರತಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಹೌದು, ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ.ಇದರಿಂದ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ಅಲ್ಲಿನ ತಾಲಿಬಾನಿಗಳು ಹರ್ಷಗೊಂಡಿದ್ದು, ತಮ್ಮ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ನಿರಂತರವಾಗಿ ಬೆಂಬಲ ನೀಡುತ್ತ ಬಂದಿರುವ ಭಾರತೀಯರಿಗೆ ಹಾಗೂ ಬಿಸಿಸಿಐಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಅಫ್ಘಾನ್ ಕ್ರಿಕೆಟ್ ಬೆಳವಣಿಗೆಯಲ್ಲಿ ಬಿಸಿಸಿಐ ಪಾತ್ರ :

ವಿಶೇಷವೆಂದರೆ ಬಿಸಿಸಿಐ 2015 ರಿಂದ ಭಾರತದಲ್ಲಿ ಅಫ್ಘಾನಿಸ್ತಾನದ ತಂಡಕ್ಕೆ ತರಬೇತಿ ನೀಡುತ್ತಿದೆ. ಆ ದೇಶದಲ್ಲಿ ಯಾವಾಗಲೂ ಯುದ್ಧದ ಪರಿಸ್ಥಿತಿ, ಆಂತರಿಕ ಸಂಘರ್ಷ ಇರುವುದರಿಂದ ಅಫ್ಘಾನ್ ತಂಡ ಸಾಕಷ್ಟು ಪಂದ್ಯಗಳನ್ನು ಗ್ರೇಟರ್ ನೋಯ್ಡಾ, ಡೆಹ್ರಾಡೂನ್ ಮತ್ತು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಆಡಿದೆ.

ಕಂದಹಾರ್‌ನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ಭಾರತ ಸರ್ಕಾರ ಧನ ನೀಡಿರುವುದು ಮತ್ತೊಂದು ಕೊಡುಗೆ. ಭಾರತ ಸರ್ಕಾರವು $1 ಮಿಲಿಯನ್ ಅನುದಾನದಲ್ಲಿ ಕಂದಹಾರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲು ಸಹಾಯ ಮಾಡಿತು. ಯುದ್ಧಪೀಡಿತ ದೇಶದಲ್ಲಿ ಕ್ರಿಕೆಟ್ ಆಟವನ್ನು, ಅಲ್ಲಿನ ತಂಡವನ್ನು ಬೆಂಬಲಿಸುತ್ತ ಬಂದಿರುವ ಭಾರತಕ್ಕೆ ಇದೀಗ ತಾಲಿಬಾನ್ ಸರ್ಕಾರ ಧನ್ಯವಾದಗಳನ್ನು ತಿಳಿಸಿದೆ.

ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಸುಹೇಲ್ ಶಾಹೀನ್ ಅವರು ಅಲ್ಲಿನ ಪತ್ರಿಕೆ ಮೂಲಕ ಭಾರತದ ಸಹಾಯವನ್ನು ಸ್ಮರಿಸಿದ್ದು, “ಆಫ್ಘಾನ್ ಕ್ರಿಕೆಟ್ ತಂಡದ ಸಾಮರ್ಥ್ಯ ವೃದ್ಧಿಯಲ್ಲಿ ಭಾರತದ ನಿರಂತರ ಸಹಾಯಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಾವು ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ” ಎಂದು ಹೇಳಿದ್ದಾರೆ.

ಜೂ. 27 ಕ್ಕೆ ಸೆಮಿಫೈನಲ್ :

ಜೂನ್ 27 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅದೇ ದಿನ ಭಾರತವು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಹೆಚ್ಚಿನ ಸುದ್ದಿ