Sunday, July 7, 2024
Homeಟಾಪ್ ನ್ಯೂಸ್OM BIRLA: ಲೋಕಸಭಾ ಸಭಾಪತಿಯಾಗಿ ಓಂ ಬಿರ್ಲಾ ಆಯ್ಕೆ -ಪ್ರಧಾನಿ ಮೋದಿ ಶುಭ...

OM BIRLA: ಲೋಕಸಭಾ ಸಭಾಪತಿಯಾಗಿ ಓಂ ಬಿರ್ಲಾ ಆಯ್ಕೆ -ಪ್ರಧಾನಿ ಮೋದಿ ಶುಭ ಹಾರೈಕೆ

ನವ ದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭಾ ಸಭಾಪತಿಯಾಗಿ ಆಯ್ಕೆಯಾದರು. ಈ ಮೊದಲ 17 ನೇ ಲೋಕಸಭಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಸ್ಪೀಕರ್ ಹುದ್ದೆಗೆ ನಡೆದ ಸ್ಪರ್ಧೆಗೆ ಧ್ವನಿ ಮತದ ಅಂಗೀಕಾರದ ಮೂಲಕ ಆಯ್ಕೆ ನಡೆಯಿತು. ಎನ್ ಡಿಎ ಓಕ್ಕೂಟದ ಧ್ವನಿ ಮೂಲಕ ಓಂ ಬಿರ್ಲಾ ಅವರಿಗೆ ಅತಿ ಹೆಚ್ಚು ಮತಗಳು ದೊರೆತು ಅವರ ಆಯ್ಕೆಯನ್ನು ಘೋಷಿಸಲಾಯಿತು.

ಎರಡನೇ ಅವಧಿಗೆ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸಚಿವ ಕಿರಣ್ ರಿಜಿಜು ಅವರು ಪೀಠದವರೆಗ ಕರೆ ತಂದು ಕುಳ್ಳಿರಿಸಿದರು.

ಈ ವೇಳೆ ನೂತನ ಸ್ಪೀಕರ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಸಚಿವರು ಅಭಿನಂದಿಸಿದರು.

ಬಿಜೆಪಿಯ ಓಂ ಬಿರ್ಲಾ ಮತ್ತು ಕಾಂಗ್ರೆಸ್‌ನ ಕೆ. ಸುರೇಶ್ ಅವರು ಸ್ಪೀಕರ್ ಸ್ಥಾನಾಕಾಂಕ್ಷಿಗಲಾಗಿದ್ದರು. ಎನ್‌ಡಿಎ ಮತ ಹೆಚ್ಚು ಇದ್ದು, ಕಾಂಗ್ರೆಸ್ ಮತಗಳ ಕೊರತೆಯಿಂದ ಕೆ. ಸುರೇಶ್ ಸೋಲಬೇಕಾಯಿತು.

ಹೆಚ್ಚಿನ ಸುದ್ದಿ