Sunday, July 7, 2024
Homeಟಾಪ್ ನ್ಯೂಸ್Russia Ukraine War: ಯುದ್ಧದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ - ರಷ್ಯಾ ವಿರುದ್ದ ಉಕ್ರೇನ್‌...

Russia Ukraine War: ಯುದ್ಧದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ – ರಷ್ಯಾ ವಿರುದ್ದ ಉಕ್ರೇನ್‌ ಗುಡುಗು!

ವಾಷಿಂಗ್ಟನ್: ರಷ್ಯಾದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಯಾರದೋ ಮಾತಿಗೆ ನಮ್ಮ ಯುದ್ಧ ನಿಲ್ಲಲ್ಲ ಎಂದು ಉಕ್ರೇನ್ ಸೇನೆ ಮುಖ್ಯಸ್ಥ ಆಂಡ್ರಿ ಯಾರ್ಮಾಕ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಟ್ಲಾಂಟದಲ್ಲಿ ನಡೆದ ಟಿವಿ ಸಂದರ್ಶನದಲ್ಲಿ ಟ್ರಂಪ್ ಹೇಳಿಕೆಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೋಬೈಡೆನ್ ಹಾಗೂ ಟ್ರಂಪ್ ಭಾಗವಹಿಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಉಮೇದುವಾರ ಟ್ರಂಪ್, ನಾನು ಗೆದ್ದ ಅಧಿಕಾರ ಹಿಡಿದರೆ ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ ತೆರೆ ಎಳೆಯುತ್ತೇನೆ ಎಂದು ಭರವಸೆ ನೀಡಿದ್ದರು.

ಈ ಮಾತಿಗೆ ಪ್ರತಿಕ್ರಿಯಿಸಿರುವ ಉಕ್ರೇನಿಯನ್ ಅಧ್ಯಕ್ಷ ಹಾಗೂ ಉಕ್ರೇನ್ ಸೇನೆ ಮುಖ್ಯಸ್ಥ ಆಂಡ್ರಿ ಯಾರ್ಮಾಕ್, ರಷ್ಯಾಕ್ಕೆ ಕೈವ್ ಪ್ರದೇಶವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ಹೆಚ್ಚಿನ ಸುದ್ದಿ