Sunday, July 7, 2024
Homeಟಾಪ್ ನ್ಯೂಸ್BJP vs Congress : ಗೋಲ್‌ ಮಾಲ್‌ ಸಿದ್ದರಾಮಯ್ಯ "ಕೈ"ಚಳಕದಿಂದ ನಾಲ್ಕು ಸಾವಿರ ಕೋಟಿ ಗುಳುಂ...

BJP vs Congress : ಗೋಲ್‌ ಮಾಲ್‌ ಸಿದ್ದರಾಮಯ್ಯ “ಕೈ”ಚಳಕದಿಂದ ನಾಲ್ಕು ಸಾವಿರ ಕೋಟಿ ಗುಳುಂ – ಆರ್‌. ಅಶೋಕ್‌

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮದಲ್ಲಿ 187 ಕೋಟಿ ರೂಪಾಯಿ ಹಾಗೂ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ‘ಕೈ’ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಸರ್ಕಾರದ ಮೇಲೆ ದಾಳಿ ಮಾಡಿದ್ದಾರೆ.

ಕೋಟಿಗಟ್ಟಲೇ ಅಕ್ರಮ ಹಣವನ್ನು ಗುಳುಂ ಮಾಡುವ ಗೋಲ್‌ಮಾಲ್ ಸಿಎಂ ಸಿದ್ದರಾಮಯ್ಯಮವರೇ ಎಂದು ವ್ಯಂಗ್ಯವಾಗಿ ಸಂಬೋಧನೆ ಮಾಡಿರುವ ಅಶೋಕ್, ಗುಳುಂ ಮಾಡುವಲ್ಲಿ ಮುಖ್ಯಮಂತ್ರಿ ‘ಸಿದ್ಧ’ಹಸ್ತರು ಎಂದಿದ್ದಾರೆ. ಈ ಬಗ್ಗೆ ಅವರು ಏಳು ಪ್ರಶ್ನೆಗಳನ್ನು ಕೇಳಿ, ಗೋಲ್ಮಾಲ್ ಸಿಎಂ @ ಸಿದ್ದರಾಮಯ್ಯ ನವರೇ, ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ? ಎಂದಿದ್ದಾರೆ.

ಆ ಏಳು ಪ್ರಶ್ನೆಗಳು ಹೀಗಿವೆ….

1.) ಗೋಲ್‌ಮಾಲ್ ಸಿಎಂ @ ಸಿದ್ದರಾಮಯ್ಯ ನವರೇ, ತಮ್ಮ ಧರ್ಮ ಪತ್ನಿಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ?

2.) ಆರೋಪ ಕೇಳಿ ಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?

3.) 4,000 ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನು ಮುಚ್ಚಿಹಾಕಲು ಹೊರಟಿದ್ದೀರಲ್ಲ ಈ ಹಗರಣದಲ್ಲಿ ತಮ್ಮ ಪಾಲೆಷ್ಟು?

4.) 50:50 ಅನುಪಾತ ಹಂಚಿಕೆಗೆ ಅನುಮತಿ ನೀಡಿದ್ದು ಯಾರು?

5.) ಪರ್ಯಾಯ ನಿವೇಶನ ನೀಡುವಾಗ ಅದೇ ಬಡಾವಣೆ ಬಿಟ್ಟು ಲಾಭದ ಬಡಾವಣೆಗಳಲ್ಲಿ ಅವಕಾಶಕ್ಕೆ ಶಿಫಾರಸ್ಸು ಮಾಡಿದ್ದು ಯಾರು?

6.) ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಿದ್ದು ಯಾರು?

7.) ನಿಮ್ಮ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ, ತಮ್ಮ ಕೈವಾಡವಿಲ್ಲದೆ ನಡೆಯಲು ಸಾಧ್ಯವೇ?

ಹೆಚ್ಚಿನ ಸುದ್ದಿ