Sunday, July 7, 2024
Homeಟಾಪ್ ನ್ಯೂಸ್Parliment Session: ಸಂವಿಧಾನದ ನೆರಳಲ್ಲಿ ಕಾಂಗ್ರೆಸ್ "ಕಪ್ಪ" ದಂಧೆ : ಮೋದಿ ವಾಗ್ದಾಳಿ

Parliment Session: ಸಂವಿಧಾನದ ನೆರಳಲ್ಲಿ ಕಾಂಗ್ರೆಸ್ “ಕಪ್ಪ” ದಂಧೆ : ಮೋದಿ ವಾಗ್ದಾಳಿ

ನವದೆಹಲಿ: ಸಂವಿಧಾನದ ನೆರಳಿನಲ್ಲಿ ಕಾಂಗ್ರೆಸ್ ತನ್ನ ಕಪ್ಪು ದಂಧೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ. ಸಣ್ಣ ಸಣ್ಣ ಪಕ್ಷಗಳ ಮೇಲೆ ಕಾಲಿಟ್ಟು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ರಾಜ್ಯಸಭಾದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ವಿರೋಧ ಪಕ್ಷದವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಈ ಹಿಂದೆ ಒಂದು ಬಾರಿ 7 ವರ್ಷ ಅಧಿಕಾರ ಚಲಾಯಿಸಿದ್ದೀರಿ. ಆದರೆ ಅಧಿಕಾರಾವಧಿ ಕೇವಲ 5 ವರ್ಷಗಳಲ್ಲವೇ? ಇದು ಯಾವ ಸಂವಿಧಾನದಲ್ಲಿ ಬರೆದಿದೆ ಎಂದು ಹೇಳುವಿರಾ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಮತದಾರರು ಮಾಡಿದ ತೀರ್ಮಾನಕ್ಕೆ ನಾನು ಗರ್ವ ಪಡುತ್ತೇನೆ. ಜನರು ರಾಜನೀತಿಗೆ ಪಾಠ ಮಾಡಿದ್ದಾರೆ. ಭರವಸೆಯ ರಾಜಕೀಯಕ್ಕೆ ವಿಜಯ ತಂದುಕೊಟ್ಟಿದ್ದಾರೆ. ನನ್ನಂತಹ ಸಾಮಾನ್ಯರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅದಕ್ಕೆ ನಾನೇ ಉದಾಹರಣೆ. ಇದಕ್ಕೆ ಡಾ. ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ. ಇದರಿಂದ ಏನಾಗಿದೆ ನೋಡಿ, ಭಾರತ ಜಿಡಿಪಿಯಲ್ಲಿ ಇಂದು ವಿಶ್ವದ ಮೂರನೇ ಸ್ಥಾನದಲ್ಲಿದೆ ಎಂದು ಸದನಕ್ಕೆ ತಿಳಿಸಿದರು.

ಭಾರತ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಿರಲ್ಲ, ಅದನ್ನು ಯಾವ ಸಂವಿಧಾನದಲ್ಲಿ ಬರೆದಿದೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದೀರಿ. ಕಾಂಗ್ರೆಸ್ ಸಂವಿಧಾನದ ವಿರೋಧಿ. 200- 300 ವರ್ಷಗಳ ಹಿಂದಿನ ವಿಚಾರಗಳನ್ನು ಮಾತನಾಡುವ ಅವರು ತುರ್ತು ಪರಿಸ್ಥಿತಿ ಬಗ್ಗೆ ಮಾತ್ರ ಮಾತನಾಡುವುದನ್ನು ಇಷ್ಟ ಪಡುವುದಿಲ್ಲ ಎಂದು ಕಿಡಿಕಾರಿದರು.

ತುರ್ತು ಪರಿಸ್ಥಿತಿ ದೇಶಕ್ಕೆ ಸಂಕಟ ತಂದಿತ್ತು. ಜೈಲಿನಲ್ಲಿ ಅನೇಕರು ಮೃತಪಟ್ಟಿದ್ದರು. ಜಯಪ್ರಕಾಶ್ ನಾರಾಯಣ ಅವರಿಗೆ ಹಿಂಸೆ ನೀಡಲಾಗಿತ್ತು. ಅವರು ಜೈಲಿನಿಂದ ಹೊರಬಂದರೂ ಅವರ ಆರೋಗ್ಯ ಸುಧಾರಿಸಲಿಲ್ಲ. ಎಷ್ಟೋ ಜನ ಮನೆಯಿಂದ ಹೊರ ಹೋದವರು ಮನೆಗೆ ಮರಳಲಿಲ್ಲ. ಅವರ ದೇಹವೂ ಸಿಗಲಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಕಾಂಗ್ರೆಸ್ ಬಳಿ ಉತ್ತರವಿದೆಯೇ? ಎಂದು ಕೇಳಿದರು.

ಹೆಚ್ಚಿನ ಸುದ್ದಿ