Sunday, July 7, 2024
Homeಚುನಾವಣೆ 2023Acharya Pramod Krishnam: ಸನಾತನ ಧರ್ಮ ವಿರೋಧವೇ ಕಾಂಗ್ರೆಸ್ ಸೋಲಿಗೆ ಕಾರಣ

Acharya Pramod Krishnam: ಸನಾತನ ಧರ್ಮ ವಿರೋಧವೇ ಕಾಂಗ್ರೆಸ್ ಸೋಲಿಗೆ ಕಾರಣ

ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ (Assembly Election Results 2023) ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ರಾಜಸ್ಥಾನ್ (Rajasthan), ಮಧ್ಯಪ್ರದೇಶ (Madhya Pradesh) ಹಾಗೂ ಛತ್ತೀಸ್​ಗಢಗಳಲ್ಲಿ (Chattisgarh) ಬಿಜೆಪಿ (BJP) ಗೆಲುವಿನತ್ತ ಸಾಗಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆ (Congress) ಬಹುಮತ ಸಿಕ್ಕಿದೆ. ಈ ಸೋಲಿಗೆ ಸನಾತನ ಧರ್ಮವನ್ನು ವಿರೋಧಿಸಿದ್ದೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸನಾತನ ಧರ್ಮವನ್ನು (Sanatan Dharma) ವಿರೋಧಿಸುವುದನ್ನು ದೇಶದಲ್ಲಿ ಯಾರೂ ಒಪ್ಪಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ವಿರೋಧಿಸುತ್ತಲೇ ಬಂದರೆ ಕಾಂಗ್ರೆಸ್ ಸೋಲುತ್ತಲೇ ಹೋಗುತ್ತದೆ. ಸನಾತನ ಧರ್ಮವನ್ನು ಕಾಂಗ್ರೆಸ್ ನಿರಂತರವಾಗಿ ವಿರೋಧಿಸುತ್ತಿದೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.

ಗೆಲುವಿಗೆ ಗಾಂಧಿ ಮಾರ್ಗ ಅನುಸರಿಸಬೇಕು

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಮಹಾತ್ಮಾ ಗಾಂಧೀಜಿಯವರ (Mahatma Gandhi) ಮಾರ್ಗವನ್ನು ಅನುಸರಿಸಬೇಕು. ಆದರೆ ಕಾಂಗ್ರೆಸ್ ಪ್ರಸ್ತುತ ಮಾರ್ಕ್ಸ್ ಮಾರ್ಗವನ್ನು ಅನುಸರಿಸುತ್ತಿದೆ. ಈ ಸಂಪ್ರದಾಯ ಬದಲಾಗಬೇಕು. ಮಹಾತ್ಮ ಗಾಂಧಿಯವರ ಸಭೆಯು ‘ರಘುಪತಿ ರಾಘವ್ ರಾಜಾ ರಾಮ್’ ಅವರ ಸ್ತೋತ್ರದೊಂದಿಗೆ ಪ್ರಾರಂಭವಾಗುತ್ತಿತ್ತು. ಆದರೆ ಕೆಲವು ನಾಯಕರು ಸನಾತನ ಧರ್ಮವನ್ನೇ ವಿರೋಧಿಸುತ್ತಿದ್ದಾರೆ. ಅಂತಹ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕದಿದ್ದರೆ ಕಾಂಗ್ರೆಸ್ ಸ್ಥಿತಿ ಎಐಎಂಐಎಂನಂತಾಗುತ್ತದೆ.

ಹೆಚ್ಚಿನ ಸುದ್ದಿ