Sunday, July 7, 2024
Homeಚುನಾವಣೆ 2023PLATFORM COLLAPSES: ವೇದಿಕೆ ಕುಸಿದು ಅವಘಡ:  ಒಬ್ಬ ಸಾವು, 17 ಮಂದಿಗೆ ಗಾಯ

PLATFORM COLLAPSES: ವೇದಿಕೆ ಕುಸಿದು ಅವಘಡ:  ಒಬ್ಬ ಸಾವು, 17 ಮಂದಿಗೆ ಗಾಯ

ದೆಹಲಿ: ಇಲ್ಲಿನ ಕಲ್ಕಾಜಿ ಮಂದಿರದಲ್ಲಿ ಮರ ಮತ್ತು ಕಬ್ಬಿಣದ ಚೌಕಟ್ಟಿನಿಂದ ಮಾಡಿದ ವೇದಿಕೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, 17 ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಲ್ಕಾಜಿ ಮಂದಿರದಲ್ಲಿ ಪೂಜೆ ಸಲ್ಲಿಸಲು ಸುಮಾರು 1,500-1,600 ಜನರು ಸೇರಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಜನರ ನೂಕುನುಗ್ಗಲಿನಿಂದ ವೇದಿಕೆ ಕುಸಿದು ಬಿದ್ದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಕಾರ್ಯಕ್ರಮ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೆಚ್ಚಿನ ಸುದ್ದಿ