Sunday, July 7, 2024
Homeಟಾಪ್ ನ್ಯೂಸ್Loksabha : ಇದೇ ಮೊದಲ ಬಾರಿಗೆ ಸಭಾಪತಿ ಆಯ್ಕೆಗೂ ಚುನಾವಣೆ - ಬಿಜೆಪಿ-ಕಾಂಗ್ರೆಸ್ ...

Loksabha : ಇದೇ ಮೊದಲ ಬಾರಿಗೆ ಸಭಾಪತಿ ಆಯ್ಕೆಗೂ ಚುನಾವಣೆ – ಬಿಜೆಪಿ-ಕಾಂಗ್ರೆಸ್ ನಡುವೆ ಹಣಾಹಣಿ!

ನವದೆಹಲಿ: ಲೋಕಸಭಾ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಇದು ಸ್ವಾತಂತ್ರ್ಯ ನಂತರದ ಮೊದಲ ಸ್ಪೀಕರ್ ಚುನಾವಾಣೆಯಾಗಲಿದೆ. ಈ ಮೊದಲು ಆಡಳಿತರೂಢ ಪಕ್ಷ ಮತ್ತು ವಿಪಕ್ಷಗಳು ಮಾತುಕತೆ ನಡೆಸಿ ಸಭಾಪತಿಯನ್ನು ಆಯ್ಕೆ ಮಾಡುತ್ತಿದ್ದವು.

ಬಿಜೆಪಿ ತನ್ನ ಕೋಟದಲ್ಲಿ ಸಭಾಪತಿ ಸ್ಥಾನಕ್ಕೆ ಓಂಪ್ರಕಾಶ್‌ ಬಿರ್ಲಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಅವರು ನಾಮಪತ್ರ ಸಲ್ಲಿಸಿದರು.

ಸಭಾಪತಿ ಸ್ಥಾನಕ್ಕೆ ಸರ್ಕಾರದ ಪರವಾಗಿ ಸಭಾಪತಿ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿ ಉಪ ಸಭಾಪತಿ ಸ್ಥಾನ ನಮಗೇ ಕೊಡಿ ಎಂದಿತ್ತು. ಆದರೆ ಇದಕ್ಕೆ ಬಿಜೆಪಿ ಅಥವಾ ಎನ್‌ಡಿಎ ಮರು ಉತ್ತರ ನಿಡದ್ದರಿಂದ ಕಾಂಗ್ರೆಸ್ ಕೂಡ ಅಭ್ಯರ್ಥಿಯನ್ನು ಘೋಷಿಸಿದೆ.

ಸತತ ಎಂಟನೇ ಬಾರಿಗೆ ಸಂಸತ್‌ ಸದಸ್ಯರಾಗಿ ಆಯ್ಕೆಗೊಂಡಿರುವ ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಸಿದರು. ಹೀಗಾಗಿ ಮೊದಲ ಬಾರಿಗೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಬಿಜೆಪಿ ಮುಖಂಡ ಪಿಯೂಷ್ ಗೋಯಲ್ ಮಾತನಾಡಿ, ಉಪ ಸಭಾಪತಿ ಸ್ಥಾನವು ವಿರೋಧ ಪಕ್ಷಕ್ಕೆ ನೀಡಬೇಕು ಎಮದು ಎಲ್ಲಿಯೂ ಬರೆದಿಲ್ಲ ಹಾಗೂ ನಾವು ಈ ಮಾತನ್ನು ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. ಸಭಾಪತಿ ಆಯ್ಕೆ ಸರಳವಾಗಿ ಆಗಬೇಕು. ಇದಕ್ಕೂ ವಿರೋಧ ಸರಿಯಲ್ಲ. ಇದರಲ್ಲಿಯೂ ರಾಜಖಿಯ ಮಾಡುವ ಕಾಂಗ್ರೆಸ್ ಧೋರಣೆಯನ್ನು ನಾವೂ ಖಂಡಿಸುತ್ತೇವೆ ಎಂದು ಘೋಯಲ್ ಕಿಡಿ ಕಾರಿದ್ದಾರೆ.

ಹೆಚ್ಚಿನ ಸುದ್ದಿ