Sunday, July 7, 2024
Homeಚುನಾವಣೆ 2023ELECTION: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: 'ಕಮಲ'ದ ಚಿತ್ರ ಬಿಡಿಸಿದ ಜೆಪಿ ನಡ್ಡಾ

ELECTION: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ‘ಕಮಲ’ದ ಚಿತ್ರ ಬಿಡಿಸಿದ ಜೆಪಿ ನಡ್ಡಾ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನು ಮಾಡುತ್ತಿವೆ. ಅದೇ ರೀತಿ ಬಿಜೆಪಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ಪಕ್ಷದ ಚಿಹ್ನೆ ಒಳಗೊಂಡಂತೆ ‘ಬದಲಾವಣೆಗಾಗಿ ಬಿಜೆಪಿ'(BJP) ಹಾಗೂ ಮತ್ತಿತರ ಘೋಷಣೆ ಸೇರಿದಂತೆ ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಗೋಡೆ ಬರಹಗಳನ್ನು ಬರೆಯುವಂತೆ ನಿರ್ಧರಿಸಲಾಗಿದೆ. ಇದರ ಅಂಗವಾಗಿ ಇಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(J. P. Nadda), ನವದೆಹಲಿಯ ಪಕ್ಷದ ಕಚೇರಿಯ ಗೋಡೆಯ ಮೇಲೆ ‘ಕಮಲ’ (ಬಿಜೆಪಿ ಚಿಹ್ನೆ) ಚಿತ್ರಿಸುವ ಮೂಲಕಈ ಅಭಿಯಾನಕ್ಕೆ ಚಾಲನೆ ನೀಡಿದರು.

ಪಕ್ಷದ 44ನೇ ಸಂಸ್ಥಾಪನಾ ದಿನದಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂಬರುವ ಚುನಾವಣೆಗೆ ಬಿಜೆಪಿಯ ಮೆಗಾ ಪ್ರಚಾರದ ಭಾಗವಾಗಿ ಈ ಅಭಿಯಾನ ಆರಂಭಿಸಲಾಗಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಈ ಬಗ್ಗೆ ಮಾತನಾಡಿದ್ದು, ಪಕ್ಷದ ಸದಸ್ಯರು 10.72 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳ ಮೇಲೆ “ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್” ಮತ್ತು “ಏಕ್ ಬಾರ್ ಫಿರ್ ಸೆ ಭಾಜ್ಪಾ ಸರ್ಕಾರ್” ಎಂಬ ಘೋಷಣೆಗಳ ಜೊತೆಗೆ ಇನ್ನು ಹಲವು ಘೋಷಣೆಗಳನ್ನು ಗೋಡೆಮೇಲೆ ಬಿಡಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ