Sunday, July 7, 2024
Homeಟಾಪ್ ನ್ಯೂಸ್MUDA Scandal : ಮೂಡಾ ಸೈಟು ನನ್ನ ಹೆಂಡತಿಗೆ ತವರಿನಿಂದ ಬಂದ ಆಸ್ತಿ - ...

MUDA Scandal : ಮೂಡಾ ಸೈಟು ನನ್ನ ಹೆಂಡತಿಗೆ ತವರಿನಿಂದ ಬಂದ ಆಸ್ತಿ – ಸಿಎಂ ಸ್ಪಷ್ಟನೆ

ಬೆಂಗಳೂರು: ಮೂಡಾ ಹಗರಣ ಆಗಿರುವುದು ಬಿಜೆಪಿ ಆಡಳಿತದಲ್ಲಿ. ಮೈಸೂರಿನಲ್ಲಿನ ಆ ಸೈಟ್‌ ಅನ್ನು ನನ್ನ ಬಾಮೈದಾ ತಗೊಂಡು ನನ್ನ ಹೆಂಡತಿಗೆ ಕೊಟ್ಟಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ಸೈಟ್‌ ನನ್ನ ಭಾವ ಮೈದುನನದ್ದು. ಅದು ನಂತರ ಭೂಸ್ವಾಧೀನ ಆಗಿತ್ತು. ಆ ಹಣವನ್ನು ನನ್ನ ಹೆಂಡತಿಗೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು.

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರು ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡಾ ಹಗರಣ ಸಂಬಂಧ ಪಟ್ಟಂತೆ ಎಕ್ಸ್‌ ಖಾತೆಯಲ್ಲಿ ಪ್ರಶ್ನೆ ಎತ್ತಿದ್ದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, 2004ರಲ್ಲಿ ಕೆಸರೆ ಗ್ರಾಮದ 4.16ಎಕರ ಜಮೀನು ಅನ್ನು ನನ್ನ ಹೆಂಡತಿಗೆ ನೀಡಿದ್ದರು. ಅದು ತವರಿನಿಂದ ನೀಡಿದ ಭೂಮಿ. ನಂತರ ಅದನ್ನು ದೇವನೂರು ಲೇಔಟ್‌ಗೆ 2017ರಲ್ಲಿ ಭೂಸ್ವಾಧೀನ ನಡೆದಿತ್ತು ಎಂದು ಹೇಳಿದರು.

ಈ ಭೂ ಸ್ವಾಧೀನಕ್ಕೆ ಪರಿಹಾರವಾಗಿ 71,457 ಅಡಿ ಜಾಗ ಕೊಡಬೇಕು. ಆದರೆ ಮೂಡಾ ಕೊಟ್ಟದ್ದು ಬರಿ 38,284 ಅಡಿ ಮಾತ್ರ. ನಂತರ ವಿಜಯನಗರ ಬಡಾವಣೆಯಲ್ಲಿ 14 ಸೈಟ್ ಕೊಟ್ಟಿದ್ದಾರೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಇನ್ನೂ ಶೇ.25 ರಷ್ಟು ಪರಿಹಾರ ಬರಬೇಕಿದೆ. ಶೇ. 50:50 ಅನುಪಾತದಲ್ಲಿ ಕಾನೂ ಜಾರಿಯಾಗಿದೆ. ಆದರೂ ಅವರಿಗೆ ಅನ್ಯಾಯ ಆಗಿದೆ. ಕಾನೂನು ಪ್ರಕಾರ ಅವರಿಗೆ ಇನ್ನು ಭೂಮಿ ದೊರೆಯಬೇಕಿದೆ ಎಂದಿದ್ದಾರೆ.

ಹೆಚ್ಚಿನ ಸುದ್ದಿ