Sunday, July 7, 2024
Homeಚುನಾವಣೆ 2023Baryl Vanneihsangi: ಮಿಝೋರಾಮ್ ನ ಅತ್ಯಂತ ಕಿರಿಯ ಶಾಸಕಿಯಾದ ಟಿವಿ ನಿರೂಪಕಿ

Baryl Vanneihsangi: ಮಿಝೋರಾಮ್ ನ ಅತ್ಯಂತ ಕಿರಿಯ ಶಾಸಕಿಯಾದ ಟಿವಿ ನಿರೂಪಕಿ

ಐಜ್ವಾಲ್: ಮಿಝೋರಾಮ್ ವಿಧಾನಸಭಾ ಚುನಾವಣೆ (Mizoram Assembly Election) ಫಲಿತಾಂಶ ಪ್ರಕಟವಾಗಿದ್ದು, ಝೋರಂ ಪೀಪಲ್ಸ್ ಮೂವ್​ಮೆಂಟ್ (ZPM) ಪಕ್ಷ ವಿಜಯ ಸಾಧಿಸಿದೆ. ZPM ಪಕ್ಷದ ಮಹಿಳಾ ಶಾಸಕಿ ಬೆರಿಲ್ ವನ್ನೈಹಸಂಗಿ (Baryl Vanneihsangi) ಸಾಕಷ್ಟು ಚರ್ಚೆ ನಡೆಯಲ್ಲಿದ್ದಾರೆ.

ಐಜ್ವಾಲ್ ಸೌತ್-III ಸ್ಥಾನದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬೆರಿಲ್ ವನ್ನೆಹಸಂಗಿ ಮಿಝೋರಾಮ್ ನ ಅತ್ಯಂತ ಕಿರಿಯ ಮಹಿಳಾ ಶಾಸಕರಾಗಿದ್ದಾರೆ. ವನ್ನೈಹಸಂಗಿ ಅವರು ಎಂಎನ್ ಎಫ್‌ನ ಎಫ್ ಲಾಲ್ನುನ್ಮಾವಿಯಾ ಅವರನ್ನು 1,414 ಮತಗಳಿಂದ ಸೋಲಿಸಿದರು. ಬೆರಿಲ್ ವನ್ನೈಹಸಂಗಿ 9,370 ಮತಗಳನ್ನು ಪಡೆದರೆ, ಎಫ್ ಲಾಲ್ನುನ್ಮಾವಿಯಾ 7,956 ಮತಗಳನ್ನು ಪಡೆದರು.

ಮಿಝೋರಾಮ್ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಬೆರಿಲ್ ವನ್ನೈಹಸಂಗಿ. ಆಕೆಗೆ 32 ವರ್ಷ. ಆಕೆಯ ಚುನಾವಣಾ ಅಫಿಡವಿಟ್ ಪ್ರಕಾರ, ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡಿದ್ದಾರೆ. ಮೇಘಾಲಯದ ಶಿಲ್ಲಾಂಗ್ ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಎಂಎ ಮಾಡಿದ್ದಾರೆ.

ವರದಿಗಳ ಪ್ರಕಾರ, ಬೆರಿಲ್ ವನ್ನೆಹಿಸಂಗಿ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ. ಅವರು ಪ್ರಸಿದ್ಧ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್ಸ್ಟಾಗ್ರಾಮ್ ನಲ್ಲಿ ಬೆರಿಲ್ ವನ್ನೈಹಸಂಗಿ ಸಾಕಷ್ಟು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ತನ್ನ ಇನ್ಸ್ಟಾಗ್ರಾಂ ಬಯೋದಲ್ಲಿ, ಅವರು ಟಿವಿ ನಿರೂಪಕಿ, ಹೊಸ್ಟೆಸ್, ಆಂಕರ್ ಮತ್ತು ರಾಜಕಾರಣಿ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸುದ್ದಿ