Sunday, July 7, 2024
Homeಚುನಾವಣೆ 2023Mizoram Election Results: ಮಿಜೋರಾಂ ಚುನಾವಣಾ ಫಲಿತಾಂಶ: ಬಹುಮತದತ್ತ ಝಡ್ ಪಿಎಂ

Mizoram Election Results: ಮಿಜೋರಾಂ ಚುನಾವಣಾ ಫಲಿತಾಂಶ: ಬಹುಮತದತ್ತ ಝಡ್ ಪಿಎಂ

ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣಾ (Mizoram Election Results) ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ರಾಮ್ ಪೀಪಲ್ಸ್ ಮೂವೆಂಟ್ (ZPM) 27 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು ಸಿದ್ದವಾಗಿದೆ.

40 ವಿಧಾನಸಭಾ ಸ್ಥಾನಗಳಿರುವ ಮಿಜೋರಾಂನಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ZPM ಪಕ್ಷ ಬಹುಮತಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 2ರಲ್ಲಿ ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ನವೆಂಬರ್ 7 ರಂದು ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು, 80.66% ರಷ್ಟು ಮತದಾನವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಮಿಜೋರಾಂನಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆ ಇರಬಹುದು ಎಂದು ಹೇಳಿತ್ತಾದರೂ, ಆಡಳಿತರೂಢ ಎಂಎನ್ ಎಫ್ ಪಕ್ಷವನ್ನು ಝಡ್ ಪಿಎಂ ಪಕ್ಷ ಸ್ಪಷ್ಟ ಬಹುಮತದಿಂದ ಸೋಲಿಸುವ ಸಾಧ್ಯತೆಗಳು ಕಾಣಿಸತೊಡಗಿವೆ.

ಹೆಚ್ಚಿನ ಸುದ್ದಿ