Sunday, July 7, 2024
Homeಚುನಾವಣೆ 2023Mizoram Election Results: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ: ಭಾರೀ ಮುನ್ನಡೆ ಕಾಯ್ದುಕೊಂಡ ZPM

Mizoram Election Results: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ: ಭಾರೀ ಮುನ್ನಡೆ ಕಾಯ್ದುಕೊಂಡ ZPM

ಐಜ್ವಾಲ್: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆ ನಡೆಯುತ್ತಿದೆ. ಭಾರೀ ಮುನ್ನಡೆ ಪಡೆದುಕೊಂಡ ಝಡ್ ಪಿಎಂ (ZPM), ಬರೋಬ್ಬರಿ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೈಸ್ತರೇ ಹೆಚ್ಚಾಗಿರುವ ಮಿಜೋರಾಂ ನಲ್ಲಿ (Mizoram) ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ (Congress) ಹಾಗೂ ಬಿಜೆಪಿಗಿಂತ (BJP) ಸ್ಥಳೀಯ ಪಕ್ಷಗಳೇ ಮೇಲುಗೈ ಸಾಧಿಸಿವೆ. ಬೆಳಗ್ಗೆ 11 ಗಂಟೆಯವರೆಗೆ ಲಭ್ಯವಾದ ಮಾಹಿತಿ ಪ್ರಕಾರ, ಬರೋಬ್ಬರಿ 29 ಸ್ಥಾನಗಳಲ್ಲಿ ಝಡ್ ಪಿಎಂ (ZPM) ಮುನ್ನಡೆ ಸಾಧಿಸಿದೆ.

ಇನ್ನು, ಎಂಎನ್ ಎಫ್ (MNF) ಪಕ್ಷಕ್ಕೆ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, 3 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕಾಂಗ್ರೆಸ್‌ಗೆ ಮುನ್ನಡೆ.

ಹೆಚ್ಚಿನ ಸುದ್ದಿ