Sunday, July 7, 2024
Homeಕ್ರೈಂTRAGEDY : ಜಲಪಾತಕ್ಕೆ ಜಿಗಿದ ವ್ಯಕ್ತಿ ನೋಡನೋಡುತ್ತಲೇ ಕೊಚ್ಚಿಹೋದ! - VIDEO

TRAGEDY : ಜಲಪಾತಕ್ಕೆ ಜಿಗಿದ ವ್ಯಕ್ತಿ ನೋಡನೋಡುತ್ತಲೇ ಕೊಚ್ಚಿಹೋದ! – VIDEO

ಮಹಾರಾಷ್ಟ್ರ : ಜಲಪಾತಕ್ಕೆ ಜಿಗಿದ ವ್ಯಕ್ತಿಯೊಬ್ಬನ ಶವ 2 ದಿನಗಳ ಬಳಿಕ ಪತ್ತೆಯಾಗಿರುವಂತಹ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿ ಜಲಪಾತಕ್ಕೆ ಜಿಗಿದ ಬಳಿ ನೀರಿನ ತೀವ್ರತೆಗೆ ಕೊಚ್ಚಿಕೊಂಡು ಹೋಗಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಮ್ಹಿನಿ ಘಾಟ್‌ನ ಪ್ಲಸ್ ವ್ಯಾಲಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಿಂಪ್ರಿ-ಚಿಂಚ್‌ವಾಡ್‌ನ ಭೋಸಾರಿ ನಿವಾಸಿ ಸ್ವಪ್ನಿಲ್ ಧಾವಡೆ (38) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಧಾವಡೆ ಮಾಜಿ ಸೈನಿಕನಾಗಿದ್ದು, ಸುಮಾರು 30 ಜನರ ಗುಂಪಿನೊಂದಿಗೆ ಟ್ರೆಕ್ಕಿಂಗ್‌ಗೆ ಆಗಮಿಸಿದ್ದಾಗ ದುರ್ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಧಾವಡೆ ಜಲಪಾತಕ್ಕೆ ಹಾರಿ ಈಜಿಕೊಂಡು ಅಲ್ಲಿಂದ ಹೊರಬರಲು ಪ್ರಯತ್ನಿಸುತ್ತಿರುವುದು ಕಾಣಿಸಿಕೊಂಡಿದೆ. ಆದರೆ ಬಲವಾದ ಪ್ರವಾಹಕ್ಕೆ ಮೇಲೆ ಬರಲು ಸಾಧ್ಯವಾಗದೆ ಜಲಪಾತದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಬಳಿಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಶಿವದುರ್ಗ ಟ್ರೆಕ್ಕಿಂಗ್ ಕ್ಲಬ್‌ನ ಸ್ವಯಂಸೇವಕರು ಕೂಡಾ ಧಾವಡೆ ಹುಡುಕಾಟದಲ್ಲಿ ತೊಡಗಿದ್ದಾರೆ. ಇದೀಗ ಎರಡು ದಿನಗಳ ಬಳಿಕ ಸೋಮವಾರ ಧಾವಡೆ ಮೃತದೇಹ ಪತ್ತೆಯಾಗಿದೆ.

ಹೆಚ್ಚಿನ ಸುದ್ದಿ