Sunday, July 7, 2024
Homeಟಾಪ್ ನ್ಯೂಸ್VIRAL : ಧೂಮಪಾನದಿಂದ ಗಂಟಲಿನಲ್ಲಿ ಕೂದಲು! ಇದೆಂಥಾ ವಿಚಿತ್ರ ಕಾಯಿಲೆ ?

VIRAL : ಧೂಮಪಾನದಿಂದ ಗಂಟಲಿನಲ್ಲಿ ಕೂದಲು! ಇದೆಂಥಾ ವಿಚಿತ್ರ ಕಾಯಿಲೆ ?

ಆಸ್ಟ್ರಿಯಾ : ಧೂಮಪಾನದಿಂದ ಕ್ಯಾನ್ಸರ್ ಆಗಬಹುದು. ಇದರಿಂದ ಆ ವ್ಯಕ್ತಿ ಸಾಯಲೂಬಹುದು. ಆದರೆ, ಇಲ್ಲೊಂದು ಕಡೆ ವಿಚಿತ್ರ ಪ್ರಕರಣ ನಡೆದಿದೆ.

52 ವರ್ಷದ ಆಸ್ಟ್ರಿಯನ್ ವ್ಯಕ್ತಿಗೆ ವಿಪರೀತ ಧೂಮಪಾನದಿಂದ ಅವನ ಗಂಟಲಿನೊಳಗೆ ಕೂದಲು ಬೆಳೆದಿವೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋಟರ್ಸ್ ಪ್ರಕಾರ, ಅನೇಕ ವರ್ಷಗಳಿಂದ ತಂಬಾಕು ಬಳಕೆಯಿಂದ ಈ ರೀತಿ ವಿಲಕ್ಷಣ ಪ್ರಕ್ರಿಯೆಗಳು ಕಂಡು ಬರುತ್ತವೆ ಎಂದು ವಿವರಿಸಿದೆ.

ಗಂಟಲಿನಲ್ಲಿ ಕೂದಲು ಬೆಳೆದಿದ್ದರಿಂದ ಗಟ್ಟಿಯಾದ ಧ್ವನಿ, ಉಸಿರಾಟದ ತೊಂದರೆ ಮತ್ತು ನಿರಂತರ ಕೆಮ್ಮ ಕಂಡು ಬಂದಿತು. ವೈದ್ಯರು ಅವನ ಗಂಟಲಿನಲ್ಲಿ ಕೂದಲು ಬೆಳೆದಿರುವುದನ್ನು ಪತ್ತೆಹಚ್ಚಿದರು. ಸುಮಾರು 2 ಇಂಚು ಉದ್ದ ಇರುವ ಆರರಿಂದ ಒಂಬತ್ತು ಕೂದಲುಗಳು ಗಂಟಲಿನಲ್ಲಿ ಬೆಳೆದಿರುವುದು ಪತ್ತೆಯಾದವು. ವೈದ್ಯರು ಅವುಗಳನ್ನು ಯಶಸ್ವಿಯಾಗಿ ತೆಗೆದು ಹಾಕಿ, ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

ಹೆಚ್ಚಿನ ಸುದ್ದಿ