Sunday, July 7, 2024
Homeಟಾಪ್ ನ್ಯೂಸ್H C MAHADEVAPPA : 'ಮತ ನಮ್ಮದು, ನಾಯಕತ್ವ ಇನ್ಯಾರದ್ದೋ..' : ದಲಿತ ಸಿಎಂ ಬಗ್ಗೆ...

H C MAHADEVAPPA : ‘ಮತ ನಮ್ಮದು, ನಾಯಕತ್ವ ಇನ್ಯಾರದ್ದೋ..’ : ದಲಿತ ಸಿಎಂ ಬಗ್ಗೆ ಮಹದೇವಪ್ಪ ಮಾತು

ಬೆಂಗಳೂರು : ದಲಿತರ ಬಳಿ(Dalit vote) ಮತ ಇದೆ ಆದರೆ ನಾಯಕತ್ವ (Leadership)ಇಲ್ಲ. ಒಟ್ಟಾಗಿ ಪಕ್ಷ ಗೆಲ್ಲಿಸಿದರೂ ಸಿಎಂ ಸ್ಥಾನ ಕೊಡಿ ಎಂದು ಬೇಡುವ ಪರಿಸ್ಥಿತಿ ಇದೆ ಎಂದು ಸಚಿವ ಹೆಚ್‌ ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ 5ನೇ ರಾಜ್ಯ ಮಟ್ಟದ ಜಾಗೃತ ಸಮಾವೇಶದಲ್ಲಿ ಮತನಾಡಿದ ಡಾ. ಹೆಚ್‌ ಸಿ ಮಹದೇವಪ್ಪ ದಲಿತರಿಗೆ ಸಿಎಂ ಸ್ಥಾನ ಸಿಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ 17 % ದಲಿತರು, 7% ಎಸ್‌ಟಿ, 15% ಅಲ್ಪಸಂಖ್ಯಾತರಿದ್ದೇವೆ , ಎಲ್ಲರೂ ಸೇರಿದರೆ ರಾಜ್ಯದಲ್ಲಿ 100ಕ್ಕೂ ಅಧಿಕ ಕ್ಷೇತ್ರ ಗೆಲ್ಲುವುದು ಅಸಾಧ್ಯವಲ್ಲ , ನಾವು ಮತ ಹಾಕಿದ್ದ ಕಾರಣಕ್ಕೆ ಸಿದ್ದರಂಆಯ್ಯ, ಯಡಿಯೂರಪ್ಪ, ದೇವೇಗೌಡರು ಸಿಎಂ ಅಗಿದ್ದು. ನಾವು ನಾಯಕತ್ವ ಬೆಳೆಸದಿರುವುದಕ್ಕೆ ಲೀಡರ್‌ಶಿಪ್‌ ಬೇರೆಯವರ ಪಾಲಾಗಿದೆ ಎಂದು ಮಹದೇವಪ್ಪ ಹೇಳಿದರು.

ಅಂಬೇಡ್ಕರ್ ಬಳಿಕ ಬೇರೆ ಸಲಿತ ಸಿಎಂ ಆಗಲಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ಜಿ ಪರಮೇರ್ಶವರ್, ಖರ್ಗೆ, ಅಥವಾ ನಾನಾಗಲಿ ನೀತಿ ರೂಪಿಸುವ ಸ್ಥಾನದಲ್ಲಿ ಇಲ್ಲ ಆದರೆ ನ್ಮಮ ಪ್ರಭಾವ ಬಳಸಿ ಮುಂಬಡ್ತಿ ಮೀಸಲಾತಿ, ಕೆಐಎಡಿಬಿ ಮೀಸಲಾತಿಯಂತಹ ಮಹತ್ವದ ತೀರ್ಮಾನ ಮಾಡಿದ್ದೇವೆ . 1987ರಲ್ಲಿ 27 ದಲಿತ ನಾಯಕರಿದ್ದಾಗ ಬಿ ರಾಚಯ್ಯ ಸಿಎಂ ಆಗಬೇಖು ಎಂದು ಹೇಳಿದ್ದು ನಾನೊಬ್ಬನೇ , ಉಳಿದವರು ಮಾತೇ ಆಡಲಿಲ್ಲ ಇದು ವಿಧಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಹೆಚ್ಚಿನ ಸುದ್ದಿ