Sunday, July 7, 2024
Homeಟಾಪ್ ನ್ಯೂಸ್T20 WC : ಭಾರತ ಗೆದ್ದ ಖುಷಿಗೆ ಬಾವುಟ ಹಾರಿಸಲು ಹೋದ -...

T20 WC : ಭಾರತ ಗೆದ್ದ ಖುಷಿಗೆ ಬಾವುಟ ಹಾರಿಸಲು ಹೋದ – ಬಾರಲು ಬಿದ್ದ! VIDEO

ಲಂಡನ್: T20 ವಿಶ್ವಕಪ್‌ನಲ್ಲಿ ಭಾರತ ತಂಡ ರೋಚಕ ಜಯ ಗಳಿಸಿದ ಬೆನ್ನಲ್ಲೇ ದೇಶ ವಿದೇಶಗಳಲ್ಲಿ ಭಾರಿ ಸಂಭ್ರಮಾಚರಣೆ ಮನೆ ಮಾಡಿದೆ.

ಲಂಡನ್‌ನ ಕ್ವೀನ್ಸ್ ಬರಿ ಎಂಬಲ್ಲಿ ಸಂಭ್ರಮಚಾರಣೆ ವೇಳೆ ಅವಘಡ ನಡೆದಿದ್ದು, ಕಂಬದ ಮೇಲೆ ಭಾರತದ ಧ್ವಜ ಕಟ್ಟಲು ಹೋಗಿದ್ದ ವ್ಯಕ್ತಿ ಜಾರಿ ಬಿದ್ದಿದ್ದಾನೆ.

ಕ್ವೀನ್ಸ್ ಬರಿ ಎಂಬಲ್ಲಿ ಭಾರತೀಯರು ಸೇರಿ ಸಂಭ್ರಮಕ್ಕೆ ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕಂಬದ ಮೇಲೆ ತ್ರಿವರ್ಣ ಧ್ವಜ ಕಟ್ಟಲು ಇಬ್ಬರು ಕಂಬ ಏರಿದ್ದಾರೆ. ಮೇಲೆ ಇದ್ದ ವ್ಯಕ್ತಿ ಕೈ ಜಾರಿ ಕಂಬದಿಂದ ಕಳೆಗೆ ಬಿದ್ದಿದ್ದಾನೆ.

ತೀವ್ರ ಗಾಯ ಗೊಂಡ ಆತನನ್ನು ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದರು. ಈ ಎಲ್ಲವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಶೂಟ್‌ ಮಾಡಿದ್ದಾರೆ. ಹೀಗೆ ಕೆಳಗೆ ಬಿದ್ದ ಆತ ಗಾಯಗೊಂಡಿದ್ದು ಬಾಯಲ್ಲಿ ರಕ್ತ ಬರುತ್ತಿದೆ. ತಕ್ಷಣ ಆತನ ನೆರವಿಗೆ ಬಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ಹೆಚ್ಚಿನ ಸುದ್ದಿ