Sunday, July 7, 2024
Homeಟಾಪ್ ನ್ಯೂಸ್LIQUOR PRICE : ಮದ್ಯಪ್ರಿಯರಿಗೆ ಖುಷಿ ಸುದ್ದಿ!

LIQUOR PRICE : ಮದ್ಯಪ್ರಿಯರಿಗೆ ಖುಷಿ ಸುದ್ದಿ!

ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ಭಾರಿ ಬೆಲೆಯ ಮದ್ಯದ (Liquor) ದರ ಅಗ್ಗವಾಗಲಿದ್ದು, ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಲಿದೆ.

ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಸತತವಾಗಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ  ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ಎಇಡಿ ಹೆಚ್ಚಿಸಿದ್ದರೆ, 2024ರ ಜನವರಿಯಲ್ಲಿ ಬಿಯರ್ ಮೇಲಿನ (additional exercise duty) ಹೆಚ್ಚಿಸಲಾಗಿತ್ತು. ಇದೇ ಮೊದಲ ಬಾರಿಗೆ ಎಇಡಿ ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ.

ನೆರೆಯ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ದರ ಪರಿಷ್ಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಈ ಘೋಷಣೆಯು ಈಗ ಜಾರಿಯಾಗಲಿದೆ.

ಹೆಚ್ಚಿನ ಸುದ್ದಿ