Sunday, July 7, 2024
Homeಟಾಪ್ ನ್ಯೂಸ್Kalki Movie : ಕಲ್ಕಿ ಸಿನಿಮಾಗೆ ಪ್ರಭಾಸ್ , ದೀಪಿಕಾ , ಬಿಗ್ ಬಿ ಪಡೆದ...

Kalki Movie : ಕಲ್ಕಿ ಸಿನಿಮಾಗೆ ಪ್ರಭಾಸ್ , ದೀಪಿಕಾ , ಬಿಗ್ ಬಿ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಬೆಂಬಲ ದೊರೆತಿದ್ದು ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸಿದ್ದಾರೆ.

ಈ ನಡುವೆ ನಟ ಪ್ರಭಾಸ್, ನಟಿ ದೀಪಿಕಾ ಪಡುಕೋಣೆ ಅವರು ಪಡೆದ ಸಂಭಾವನೆ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ.

ನಟ ಪ್ರಭಾಸ್ ಕಲ್ಕಿಗಾಗಿ 80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಕಮಲ್ ಹಾಸನ್ 20 ಕೋಟಿ ರೂ. ಹಾಗೂ ದಿಶಾ ಪಟಾನಿಗೆ 2 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿನಿಮಾ ಬಗ್ಗೆ ನಟ ಯಶ್ ಹಾಡಿ ಹೊಗಳಿದ್ದಾರೆ. ಕಲ್ಕಿ ಚಿತ್ರವು ಮೊದಲ ದಿನ ಕಲೆಕ್ಷನ್ ನಲ್ಲಿ ಕೆಜಿಎಫ್ ಗೂ ಹೆಚ್ಚು ಗಳಿಸಿ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ. ಸಿನಿಮಾ ನಿದೇರ್ಶಕ ನಾಗ್ ಅಶ್ವಿನ್ ಅವರು ಕಲ್ಕಿ ಸಿನಿಮಾವನ್ನು ಜನ ಅದ್ಭುತವಾಗಿ ಸ್ವೀಕರಿಸಿದ್ದಕ್ಕೆ ಒಂದು ಫೋಟೊ ಹಂಚಿಕೊಂಡಿದ್ದರು. ಅದರಲ್ಲಿ ಒಂದು ಹರಿದ ಚಪ್ಪಲಿ ಇತ್ತು ಅಷ್ಟೆ.

ಹೆಚ್ಚಿನ ಸುದ್ದಿ