Sunday, July 7, 2024
Homeಟಾಪ್ ನ್ಯೂಸ್Hijab : ಹಿಜಾಬ್ ಧರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಫಲಿತಾಂಶಕ್ಕೆ ತಡೆ!

Hijab : ಹಿಜಾಬ್ ಧರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಫಲಿತಾಂಶಕ್ಕೆ ತಡೆ!

ಶ್ರೀಲಂಕಾ: ಹಿಜಾಬ್ ಜಗಳ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಪಕ್ಕದ ದೇಶ ಶ್ರೀಲಂಕಾಗೂ ಹಬ್ಬಿದೆ. ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸಿ ಬಂದಿದ್ದ 70 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಹಿಜಾಬ್ ಧರಿಸದೇ ಪರೀಕ್ಷೆ ಬರೆದವರ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಪರೀಕ್ಷೆ ಆರಂಭವಾದಾಗ ಕೆಲ ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಹಿಜಾಬ್ ಧರಿಸಬಾರದು ಎನ್ನುವುದು ಒಂದು. ಷರತ್ತುಗಳನ್ನು ಪಾಲಿಸಿ ಪರೀಕ್ಷೆ ಬರೆದವರ ಫಲಿತಾಂಶ ಪ್ರಕಟಿಸಲಾಗಿದೆ.

ವಿಧಿಸಿದ್ದ ‍ಷರತ್ತುಗಳಲ್ಲಿ ಪರೀಕ್ಷೆ ಬರೆಯುವವರು ಮುಗಿಯುವವರೆಗೆ ಹಿಜಾಬ್ ಧರಿಸಬಾರದು ಎಂದು ತಿಳಿಸಿತ್ತು. ಇದಕ್ಕೆ ಅಲ್ಲಿನ ಪಾರ್ಲಿಮೆಂಟ್ ಕೂಡ ಸಾಥ್ ನೀಡಿದ್ದು, ಇಂತಹ ನಿಯಮ ಜಾರಿಗೆ ಸೈ ಎಂದಿತ್ತು. ಆದರೂ ಈ 70 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದಿದ್ದರು. ಅವರ ಫಲಿತಾಂಶವನ್ನು ಈಗ ತಡೆಹಿಡಿಯಲಾಗಿದೆ.

ಹೆಚ್ಚಿನ ಸುದ್ದಿ