Sunday, July 7, 2024
Homeಟಾಪ್ ನ್ಯೂಸ್Heart Attack : ಕುಳಿತಲ್ಲೇ ಜೀವ ಬಿಟ್ಟ ಬ್ಯಾಂಕ್‌ ನೌಕರ..! - VIDEO

Heart Attack : ಕುಳಿತಲ್ಲೇ ಜೀವ ಬಿಟ್ಟ ಬ್ಯಾಂಕ್‌ ನೌಕರ..! – VIDEO

ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬ ಕುಳಿತಲ್ಲೇ ಹೃದಯ ಸ್ತಂಭನಕ್ಕೊಳಗಾಗಿ ಜೀವ ಬಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

ಆಫೀಸ್ ‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಇದ್ದಕ್ಕಿದ್ದಂತೆ ಚೇರ್‌ಗೆ ಒರಗಿ ಕುಳಿತುಕೊಳ್ಳುತ್ತಾನೆ. ಕಣ್ಣು ಮೇಲೆ ಮಾಡಿ ಕೈಗಳನ್ನು ಇಳಿಬಿಟ್ಟುಬಿಡುತ್ತಾನೆ. ಕ್ಷಣಾರ್ಧದಲ್ಲೇ ಆತ ಜೀವ ತ್ಯಜಿಸುತ್ತಾನೆ. ಅಕ್ಕ ಪಕ್ಕದವರಿಗೆ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಈತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ವಿಡಿಯೋ ಕಂಡು ಬೆಚ್ಚಿಬಿದ್ದಿರುವ ಜನ ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದು, ಕರೋನಾ ಬಳಿಕ ಇದು ಸಹಜ ಎಂದು ಆತಂಕ ವ್ಯಕ್ತಪಡಿಸಿದವರೇ ಹೆಚ್ಚಿದ್ದಾರೆ. ಒಬ್ಬರಂತೂ ವ್ಯಾಕ್ಸಿನ್ ಪಡೆದ ಮೇಲೆ ಹೃದಯಾಘಾತಗಳು ಉಲ್ಬಣವಾಗಿವೆ. ನಮ್ಮನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ.

ಕೆಲಸದಲ್ಲಿ ಒತ್ತಡ, ಮನೆಯಲ್ಲಿ ಒತ್ತಡ, ನಾವು ಗಳಿಸಿದ ಆದಾಯದಲ್ಲಿ ಶೇ.60 ತೆರಿಗೆ ಪಾವತಿ… ಇನ್ನೇನಿದೆ..? ಹಗಲಲ್ಲಿ ದನದ ತರ ದುಡಿದು ತೆರಿಗೆ ಕಟ್ಟಿದರೆ ಹೀಗಾಗುತ್ತೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ

ಹೆಚ್ಚಿನ ಸುದ್ದಿ