Sunday, July 7, 2024
Homeಕ್ರೀಡೆCricket: ಟೀಂ ಇಂಡಿಯಾ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ಗೆ ಇಂದು ಸಂದರ್ಶನ!

Cricket: ಟೀಂ ಇಂಡಿಯಾ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ಗೆ ಇಂದು ಸಂದರ್ಶನ!

ಮುಂಬೈ: ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಇಂದು ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಸಂದರ್ಶನ ಎದುರಿಸಲಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜೂಮ್ ಕರೆ ಮೂಲಕ ಗೌತಮ್ ಗಂಭೀರ್‌ಗೆ ಸಂದರ್ಶನ ನಡೆಸಲಿದೆ. ಇನ್ನು ಈ ಸಂದರ್ಶನವನ್ನು ಎದುರಿಸುತ್ತಿರುವ ಏಕೈಕ ಅಭ್ಯರ್ಥಿ ಗೌತಮ್ ಗಂಭೀರ್ ಆಗಿದ್ದಾರೆ.
ಗಂಭೀರ್ ಭಾರತದ ಹೊಸ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಅವರ ಅಧಿಕಾರಾವಧಿ ಜುಲೈ 2024 ರಿಂದ ಪ್ರಾರಂಭವಾಗಿ ಮುಂದಿನ ಏಕದಿನ ವಿಶ್ವಕಪ್ ಸೇರಿದಂತೆ ಡಿಸೆಂಬರ್ 31, 2027ರವರೆಗೆ ಇರಲಿದೆ ಎಂದು ಗಂಭೀರ್ ಅವರನ್ನು ಸಂದರ್ಶಿಸುವ ಸಮಿತಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ, ಸುಲಕ್ಷಣಾ ನಾಯಕ್ ತಿಳಿಸಿದ್ದಾರೆ. ಇತ್ತ 2024ರ ಟಿ-20 ವಿಶ್ವಕಪ್ ಬಳಿಕ ಭಾರತ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯಲಿದ್ದಾರೆ.

ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ಗಂಭೀರ್ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಕಳೆದ ತಿಂಗಳು ಕೋಲ್ಕತಾ ನೈಟ್ ರೈಡರ್ಸ್‌ನೊಂದಿಗೆ ಐಪಿಎಲ್ ಗೆಲ್ಲುವ ಮೊದಲು ಅವರು 2022 ಮತ್ತು 2023ರಲ್ಲಿ ಎಲ್‌ಎಸ್‌ಜಿಯನ್ನು ಪ್ಲೇಆಫ್ ಅರ್ಹತೆಗೆ ಮುನ್ನಡೆಸಿದರು.

ಹೆಚ್ಚಿನ ಸುದ್ದಿ