Sunday, July 7, 2024
Homeಚುನಾವಣೆ 2023TELANGANA ELECTION: ತೆಲಂಗಾಣ ಕಾಂಗ್ರೆಸ್​ ವಿಜಯದ ಹಿಂದಿರುವ ಸೂತ್ರಧಾರ ಯಾರು ಗೊತ್ತಾ?

TELANGANA ELECTION: ತೆಲಂಗಾಣ ಕಾಂಗ್ರೆಸ್​ ವಿಜಯದ ಹಿಂದಿರುವ ಸೂತ್ರಧಾರ ಯಾರು ಗೊತ್ತಾ?

ಹೈದರಾಬಾದ್: ಕರ್ನಾಟಕದಲ್ಲಿ (Karnataka) ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ (Congress) ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ (Sonia Gandhi) ಅವರ ಕನಸನ್ನು ನನಸಾಗಿಸುವ ಮೂಲಕ ತೆಲಂಗಾಣದಲ್ಲಿ (Telanagana) ಮೊದಲ ಬಾರಿಗೆ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಇದಕ್ಕೆ ಪಕ್ಷ ರೂಪಿಸಿದ ಚುನಾವಣಾ ಕಾರ್ಯತಂತ್ರ, ಗ್ಯಾರಂಟಿಗಳು ಎಷ್ಟು ಕಾರಣವೋ ಅಷ್ಟೇ ಕಾರಣ ತಂತ್ರಗಾರ ಸುನೀಲ್ ಕಾನುಗೋಲು (Sunil Kanugolu).

ಕಾಂಗ್ರೆಸ್‌ಗೆ ಬರುವ ಮೊದಲು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K.Chandrashekar rao) ಅವರ ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದೊಂದಿಗೆ ಕಾನುಗೋಲು ಅನೇಕ ಸುತ್ತಿನ ಸಭೆಗಳನ್ನು ನಡೆಸಿದ್ದರು. ಆದರೆ ನಂತರ ಕಾಂಗ್ರೆಸ್‌ಗೆ ಸೇರುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಅಲ್ಲದೇ ಅತ್ಯಲ್ಪ ಸಮಯದಲ್ಲಿ ಚುನಾವಣಾ ಕಾರ್ಯತಂತ್ರ ಸಮಿತಿಯ ಅಧ್ಯಕ್ಷರಾದರು.

ನಿರ್ಣಾಯಕ ಪಾತ್ರ

ಕಳೆದ ವರ್ಷ ಮೇನಲ್ಲಿ ಕಾನುಗೋಲು ಅವರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರಲಾಯಿತು. ಅಂದಿನಿಂದ ಅವರು ಪಕ್ಷದ ಕಾರ್ಯತಂತ್ರಗಾರರಾಗಿ ಕೆಲಸ ಮಾಡಿದ್ದಾರೆ ಹಾಗೂ ತೆಲಂಗಾಣದಲ್ಲಿ ಸಮೀಕ್ಷೆಗಳನ್ನು ಸಿದ್ಧಪಡಿಸುವುದು, ಪ್ರಚಾರ ಮಾಡುವುದು, ಅಭ್ಯರ್ಥಿಗಳನ್ನು ನಿರ್ಧರಿಸುವುದು ಮತ್ತು ಗೆಲ್ಲುವ ಕಾರ್ಯತಂತ್ರದ ಜವಾಬ್ದಾರಿಯನ್ನು ಹೊಂದಿದ್ದರು. ಅವರ ಕೆಲಸವು ನಿರ್ಣಾಯಕ ಪಾತ್ರವನ್ನು ವಹಿಸಿದೆ.

ವರಿಷ್ಟರಿಂದ ಬರ್ಜರಿ ಪ್ರಚಾರ

ಮಧ್ಯಪ್ರದೇಶ (Madhya pradesh) ಮತ್ತು ಛತ್ತೀಸ್ ಗಢಕ್ಕೆ (Chattisgarh) ಹೋಲಿಸಿದರೆ ತೆಲಂಗಾಣವನ್ನು ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ. ತೆಲಂಗಾಣದಲ್ಲಿ ಆಕ್ರಮಣಕಾರಿ ಪ್ರಚಾರಕ್ಕೆ ರಾಹುಲ್ ಗಾಂಧಿ (Rahul Gandhi) ಅವರಿಂದ ಒಪ್ಪಿಗೆ ಪಡೆದಿದ್ದರು ಎಂದು ಪಕ್ಷದ ಮೂಲವೊಂದು ತಿಳಿಸಿದೆ. ಸುನೀಲ್ ಕಾನುಗೋಲು ಅವರ ಈ ತಂತ್ರದ ಫಲವಾಗಿಯೇ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಜಂಟಿಯಾಗಿ ಆಗಸ್ಟ್ 25 ರಿಂದ ರಾಜ್ಯದಲ್ಲಿ 65 ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳನ್ನು ನಡೆಸಿದ್ದರು.

ದಕ್ಷಿಣ ರಾಜ್ಯಗಳ ತಂತ್ರ ನಾಯಕ

ಪಕ್ಷದ ಮುಖಂಡರ ಪ್ರಕಾರ, ತೆರೆಮರೆಯಲ್ಲಿಯೇ ಉಳಿದಿರುವ ಸುನೀಲ್ ಕಾನುಗೋಲು ದಕ್ಷಿಣ ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೂ ರಣತಂತ್ರ ಸಿದ್ಧಪಡಿಸಿದ್ದಾರೆ. ತೆಲಂಗಾಣದ ಸ್ಪರ್ಧೆ ತ್ರಿಕೋನವಾಗದಂತೆ ಆಡಳಿತಾರೂಢ BRS, BJP ಮತ್ತು AIMIM ಅನ್ನು ಮೂಲೆಗುಂಪು ಮಾಡುವುದು ಅವರ ತಂತ್ರವಾಗಿತ್ತು. ಇದು ಪಕ್ಷದ ಪರವಾಗಿ ಕೆಲಸ ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್ ಭರವಸೆಗಳನ್ನು ಪಕ್ಷದ ನಾಯಕತ್ವ ಒಪ್ಪುವಂತೆ ಮಾಡುವ ಜವಾಬ್ದಾರಿಯೂ ಅವರ ಮೇಲಿತ್ತು.

ಹೆಚ್ಚಿನ ಸುದ್ದಿ