Sunday, July 7, 2024
Homeಟಾಪ್ ನ್ಯೂಸ್DENGUE : ಹಾಸನದಲ್ಲಿ ಡೆಂಘಿ ಅಬ್ಬರ: ಬಾಲಕಿ ಸಾವು!

DENGUE : ಹಾಸನದಲ್ಲಿ ಡೆಂಘಿ ಅಬ್ಬರ: ಬಾಲಕಿ ಸಾವು!

ಹಾಸನ : ಮಾರಕ ಡೆಂಘಿ ಜ್ವರ ರೌದ್ರಾವತಾರ ತಾಳಿದ್ದು ಓರ್ವ ಬಾಲಕಿಯನ್ನು ಬಲಿ ಪಡೆದಿದೆ

ಹಾಸನದ ಹೊಳೆನರಸಿಪುರ ತಾಲೂಕಿನ ಗುಡ್ಡನಹಳ್ಳಿ ಗ್ರಾಮದ ನಿವಾಸಿ 11 ವರ್ಷದ ಕಲಾಶ್ರೀ ಡೆಂಘಿ ಜ್ವರಕ್ಕೆ ಬಲಿಯಾದ ಬಾಲಕಿ

ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕಲಾ ಶ್ರೀಗೆ ಹೊಳೆನರಸೀಪುರ ಪಟ್ಟಣದ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ಕಲಾಶ್ರೀ ಪೋಷಕರು ಆಕೆಯನ್ನು ದಾಖಲಿಸಿದ್ದರು

ದುರದೃಷ್ಟವಶಾತ್ ಚಿಕಿತ್ಸೆ ಫಲ ನೀಡದೆ ಕಲಾ ಶ್ರೀ ಮೃತಪಟ್ಟಿದ್ದಾಳೆ

ಹಾಸನದಲ್ಲಿ ಕಳೆದೊಂದು ವಾರದಲ್ಲಿ ಇದು ಎರಡನೇ ಡೆಂಘಿ ಸಾವು ಪ್ರಕರಣವಾಗಿದ್ದು ಜೂನ್ 28 ರಂದು ಹೊಳೆನರಸೀಪುರದಲ್ಲೇ 8 ವರ್ಷದ ವರ್ಷಿಕ ಮೃತಪಟ್ಟಿದ್ದಳು

ಹೆಚ್ಚಿನ ಸುದ್ದಿ