Sunday, July 7, 2024
Homeಟಾಪ್ ನ್ಯೂಸ್ISRAEL WAR : ಆನ್‌ಲೈನ್‌ ನಕ್ಷೆಯಲ್ಲಿ ಇಸ್ರೇಲ್‌ ಹೆಸರು ತೆಗೆದುಹಾಕಿದ ಚೀನಾ ಕಂಪನಿಗಳು!

ISRAEL WAR : ಆನ್‌ಲೈನ್‌ ನಕ್ಷೆಯಲ್ಲಿ ಇಸ್ರೇಲ್‌ ಹೆಸರು ತೆಗೆದುಹಾಕಿದ ಚೀನಾ ಕಂಪನಿಗಳು!

ಇಸ್ರೇಲ್‌(israel), ಹಮಾಸ್‌(hamas) ನಡುವಿನ ಸಂಘರ್ಷ ತೀವ್ರತೆ ಪಡೆದಿದ್ದು ಕದನ ವಿರಾಮ(ceasefire) ಘೋಷಣೆ ಸಾಧ್ಯವೇ ಇಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು(benjamin netanyahu) ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮತ್ತೊಂದು ಬೆಳವಣಿಗೆ ನಡೆದಿದೆ.

 

ಪ್ಯಾಲಿಸ್ಟೇನ್‌ ಬೆಂಬಲಕ್ಕೆ ನಿಂತಿರುವ ಚೀನಾದ ಕೆಲವು ಕಂಪನಿಗಳು ತಮ್ಮ ಆನ್‌ಲೈನ್‌ ನಕ್ಷೆಯಿಂದ ಇಸ್ರೇಲ್‌ ಪದವನ್ನು ತೆಗೆದು ಹಾಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅಲಿಬಾಬ ಮತ್ತು ಬೈದು ಅಂತಹ ಕಂಪನಿಗಳ ಈ ನಡೆ ಅಚ್ಚರಿ ಮೂಡಿಸಿದೆ.

ನಕ್ಷೆಯಲ್ಲಿ ಅತಿ ಚಿಕ್ಕ ರಾಷ್ಟ್ರವನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಗಡಿ ಗುರುತಿಸಲಾಗಿದ್ದರು ಅದರಲ್ಲಿ ಇಸ್ರೇಲ್‌ ಹೆಸರನ್ನು ನಮೂದಿಸಿಲ್ಲ. ಚೀನಾ ಇಂಟರ್ನೆಟ್‌ ಬಳಕೆದಾರರು ಈ ಬದಲಾವಣೆಯನ್ನು ಗುರುತಿಸಿದ್ದು ಅಲಿಬಾಬ, ಬೈದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸಂಘರ್ಷದ ಆರಂಭದಿಂದಲೂ ಕದನ ವಿರಾಮವನ್ನು ಬೆಂಬಲಿಸಿದ್ದ ಚೀನಾ ಶಾಂತಿ ಸ್ಥಾಪನೆಗೆ ಸಲಹೆ ನೀಡಿತ್ತು ಆದರೆ ಇತ್ತೀಚೆಗೆ ಇಸ್ರೇಲ್‌ಗೆ ಹಮಾಸ್‌ನಿಂದ ತನ್ನನ್ನ ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿಕೆ ನೀಡಿತ್ತು. ಈಗ ನಕ್ಷೆ ಬದಲಾವಣೆ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ.

ಹೆಚ್ಚಿನ ಸುದ್ದಿ