Sunday, July 7, 2024
Homeಟಾಪ್ ನ್ಯೂಸ್Kalki movie : ಸೋಮವಾರವೂ ತಗ್ಗದ ಕಲ್ಕಿ ಸಿನಿಮಾ ಆದಾಯ - ಬಾಕ್ಸಾಫೀಸ್‌ ಕಲೆಕ್ಷನ್‌ ಎಷ್ಟು...

Kalki movie : ಸೋಮವಾರವೂ ತಗ್ಗದ ಕಲ್ಕಿ ಸಿನಿಮಾ ಆದಾಯ – ಬಾಕ್ಸಾಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತೇ?

ಮುಂಬಯಿ: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟನೆಯ ಆದ್ಧೂರಿ ಚಿತ್ರ ಕಲ್ಕಿ 2898 ಎಡಿ ಭಾರಿ ಗಳಿಕೆ ಮಾಡುತ್ತಿದ್ದು ಸೋಮವಾರವೂ ಕೋಟಿಗಟ್ಟಲೇ ತಂದಿದೆ. ವಾರಾಂತ್ಯಗಳಲ್ಲಿ ಸಿನಿಮಾ ಗಳಿಸುವುದು ಸಾಮಾನ್ಯ. ಆದರೆ ಕಲ್ಕಿ ಸೋಮವಾರ ಒಂದೇ ದಿನ 100 ಕೋಟಿ ರೂ. ಗಳಿಸುವ ಮೂಲಕ ಹೊಸ ಮೈಲುಗಲ್ಲು ಹಾಕಿದೆ.

ನಾಗ್ ಅಶ್ವಿನ್ ನಿದೇರ್ಶನ ಹಾಗೂ ಪ್ರಮುಖ ತಾರಾಗಣದ ಈ ಚಿತ್ರ ಕಳೆದ ವಾರ ವಿಶ್ವದೆಲ್ಲೆಡೆ ಬಿಡುಗಡೆಯಾಗಿದೆ. ವಾರಾಂತ್ಯಗಳಲ್ಲಿ ಗಳಿಸುವ ಸಿನಿಮಾಗಳು ವಾರದ ಆರಂಭದಲ್ಲಿ ಅದೂ ಸೋಮವಾರದ ದಿನ ಇಷ್ಟು ಗಳಿಕೆ ಮಾಡಿರುವುದು ಸಿನಿಮಾ ಮಂದಿಗೆ ಆಶ್ಚರ್ಯ ತಂದಿದೆ.

ಸೋಮವಾರ ಒಂದೇ ದಿನ 84 ಕೋಟಿ ರೂ. ಗಳಿಕೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಸಿನಿಮಾ ಬಿಡುಗಡೆಗೊಂಡು ಈವರೆಗೆ 635 ಕೋಟಿ ರೂ. ಗಳಿಸಿದೆ ಎನ್ನಲಾಗಿದ್ದು, ಇದು ಹೀಗೆ ಮುಂದುವರಿದರೆ 1000 ಕೋಟಿ ರೂ. ತಲುಪಲಿದೆ ಎಂಬುದು ಸಿನಿಮಾ ಮಂದಿಯ ಲೆಕ್ಕಾಚಾರ.

ಕಲ್ಕಿ ಬಿಡುಗಡೆಗೊಂಡ ಮೊದಲ ದಿನವೇ ವಿಶ್ವದಾದ್ಯಂತ 191 ಕೋಟಿ ರೂ. ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಮೊದಲ ದಿನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಾದ ಸಲಾರ್, ಕೆಜಿಎಫ್ 2, ಹಾಗೂ ಲಿಯೋ ಸಿನಿಮಾಗಳನ್ನು ಹಿಂದಿಕ್ಕಿ ಸಾಗಿದೆ.

ಹೆಚ್ಚಿನ ಸುದ್ದಿ