Sunday, July 7, 2024
Homeಟಾಪ್ ನ್ಯೂಸ್Biden vs Trump : ಚರ್ಚೆಯಲ್ಲಿ ಗೆದ್ದ ಬೈಡನ್ ಎಂದ ಡೆಮಾಕ್ರಾಟ್ಸ್ ಪಕ್ಷ - ಹಹ್ಹಹ್ಹಾ...

Biden vs Trump : ಚರ್ಚೆಯಲ್ಲಿ ಗೆದ್ದ ಬೈಡನ್ ಎಂದ ಡೆಮಾಕ್ರಾಟ್ಸ್ ಪಕ್ಷ – ಹಹ್ಹಹ್ಹಾ ಎಂದ ಎಲಾನ್ ಮಸ್ಕ್!

ಅಟ್ಲಾಂಟ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳಾದ ಡೋನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ಅವರ ಸಂದರ್ಶನ ಪ್ರಸಾರ ಮಾಡಿತ್ತು. ಈ ಸಂದರ್ಶನಕ್ಕೆ ಅಮೆರಿಕ ನಾಗರಿಕರು ಬೈಡೆನ್ ಗೆ ಶೂನ್ಯ ಅಂಕ ನೀಡಿದರೆ ಟ್ರಂಪ್ ಗೆ ಒಂದು ಅಂಕ ನೀಡಿದ್ದಾರೆ. ಸಂದರ್ಶನದಲ್ಲಿ ಟ್ರಂಪ್ ‌ಗೆ ಗೆಲುವಾಗಿದೆ ಎಂದು ಘೋಷಿಸಿದ್ದಾರೆ.

ಸಿಎನ್ಎನ್ ನಡೆಸಿದ ಸಂದರ್ಶನ ಹಾಗೂ ನಂತರದ ಸಮೀಕ್ಷೆಯಲ್ಲಿ ಟ್ರಂಪ್ ಗೆ ಶೇ.67 ಮತಗಳು ಬಂದಿದ್ದು, ಬೈಡೆನ್ ಗೆ ಶೇ. 33 ಮತಗಳು ಬಂದಿವೆ.

ನ್ಯೂಯಾರ್ಕ್‌ ಟೈಮ್ಸ್ ಟ್ರಂಪ್ ಅವರದ್ದೇ ಗೆಲುವು ಎಂದು ಘೋಷಿಸಿದ್ದು ಬೈಡೆನ್ ಸೋತಿದ್ದಾರೆ ಎಂದಿದೆ. ಇನ್ನು ಸಿಎನ್ಎನ್ ಸಮೀಕ್ಷೆಯಲ್ಲಿಮತದಾರರು ಬೈಡೆನ್ ಅವರಿಗೆ ದೇಶ ನಡೆಸುವ ತಾಕತ್ತಿನ ಕೊರತೆ ಇದೆ ಎಂದು ತಮ್ಮ ಅಭಿಮತವನ್ನು ದಾಖಲಿಸಿದ್ದಾರೆ.

ಆದರೂ ದಿ ಡೆಮೊಕ್ರಾಟ್ಸ್ ಪಕ್ಷ ಎಕ್ಸ್‌ನಲ್ಲಿ ಇವತ್ತಿನ ಡಿಬೆಟ್ ವಿನ್ನರ್ ಎಂದು ಬೈಡೆನ್ ಫೋಟೊ ಹಾಕಿದೆ. ಇದನ್ನು ಹಂಚಿಕೊಂಡಿರುವ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ LOL (Lough out loud) ಹ್ಹಾಹ್ಹಾ ಎಂದು ನಗೆಯಾಡಿದ್ದಾರೆ.

ಹೆಚ್ಚಿನ ಸುದ್ದಿ