Sunday, July 7, 2024
Homeಟಾಪ್ ನ್ಯೂಸ್Viral story : ಏರ್‌ಪೋರ್ಟಿನಲ್ಲಿ ಲಗೇಜು ಕಳೆದುಕೊಂಡ ಪ್ರೇಯಸಿ - ಟೆಕ್ಕಿ ಪ್ರಿಯಕರ ಮಾಡಿದ್ದೇನು...

Viral story : ಏರ್‌ಪೋರ್ಟಿನಲ್ಲಿ ಲಗೇಜು ಕಳೆದುಕೊಂಡ ಪ್ರೇಯಸಿ – ಟೆಕ್ಕಿ ಪ್ರಿಯಕರ ಮಾಡಿದ್ದೇನು ಗೊತ್ತೇ?

ನವ ದೆಹಲಿ: ಬಸ್‌, ರೈಲು, ವಿಮಾನಗಳಲ್ಲಿ ಲಗೇಜ್ ಕಳೆದರೆ ಏನು ಮಾಡಬಹುದು? ಬಹಳ ಅಂದ್ರೆ ಸಂಬಂಧ ಪಟ್ಟ ಇಲಾಖೆಗೆ ಕಂಪ್ಲೆಂಟ್ ಕೊಡಬಹುದು. ಅಷ್ಟೇ ಇನ್ನೇನು ಮಾಡಕ್ಕಾಗುತ್ತೆ…..

ಆದರೆ ಈತ ಮಾಡಿದ್ದು ಮಾತ್ರ ಬೊಂಬಾಟ್. ಅದು ಮಜಾ ಇದೆ. ಇಲ್ಲಿದೆ ನೋಡಿ ಫುಲ್‌ ಡಿಟೈಲ್ಸ್…

ಆಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳು. ಆಕೆಯ ಲಗೇಜ್ ಕಳೆದುಹೊಯಿತು. ಅದನ್ನು ತನ್ನ ಬಾಯ್‌ಫ್ರೆಂಡ್‌ಗೆ ಹೇಳಿಕೊಂಡಳು. ಆತ ಹೇಳಿ ಕೇಳಿ ಟೆಕ್ಕಿಯಾಗಿ ಕೆಲಸ ಮಾಡುವವ.

ಈ ವಿಮಾನ ಪ್ರಯಾಣ ಮತ್ತು ಅಲ್ಲಿ ಕಳೆಯುವ ಲಗೇಜ್ ಮೇಲಿನ ಸಿಟ್ಟಿನಿಂದಾಗಿ ಆತ ಒಂದು ವೆಬ್‌ಸೈಟ್ ನಿರ್ಮಾಣ ಮಾಡಿದ. ಅದಕ್ಕೆ ಆತ ಇಟ್ಟ ಹೆಸರು ‘luggagelosers.com’! ಇದನ್ನು ರಿವೆಂಜ್ ಪ್ರಾಜೆಕ್ಟ್ ಎಂದು ಕರೆದುಕೊಂಡಿದ್ದಾನೆ.

ಲಗೇಜ್ ಕಳೆದುಕೊಂಡ ಅವಳ ಪ್ರಿಯಕರನ ಹೆಸರು ಪೀಟರ್ ಲೆವೆಲ್ಸ್. ಈ ಬಗ್ಗೆ ಪೀಟರ್ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ಈ ವೆಬ್‌ಸೈಟ್‌ ಅನ್ನು ನಾನು ನನ್ನ ಗರ್ಲ್ ಫ್ರೆಂಡ್ ಕಳೆದುಕೊಂಡ ಲಗೇಜ್ ಗಾಗಿ ಮಾಡಿದೆ. ಅದು ಕಳೆದು ಒಂದು ವಾರವಾದರೂ ವಾಪಸ್ ತಂದುಕೊಟ್ಟಿಲ್ಲ ಎಂದು ಬರೆದುಕೊಂಡು ವಿಮಾನ ಪ್ರಾಧಿಕಾರದ ಮೇಲೆ ಕಿಡಿ ಕಾರಿದ್ದಾನೆ.

ಈ ವೆಬ್‌ಸೈಟ್‌ ಪ್ರಕಾರ ಲಗೇಜ್ ಕಳೆಯುವ ವಿಮಾನಗಳ ಟಾಪ್‌ ಐದರಲ್ಲಿ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳು ಸ್ಥಾನ ಪಡೆದಿವೆ.

ಹೆಚ್ಚಿನ ಸುದ್ದಿ