Sunday, July 7, 2024
Homeಟಾಪ್ ನ್ಯೂಸ್viral video : ರೀಲ್ಸ್ ಗಾಗಿ ಸಿಗರೇಟ್ ಸೇದಿದ ಯುವತಿ : ಮನೆಯಲ್ಲಿ ಬಿದ್ವು...

viral video : ರೀಲ್ಸ್ ಗಾಗಿ ಸಿಗರೇಟ್ ಸೇದಿದ ಯುವತಿ : ಮನೆಯಲ್ಲಿ ಬಿದ್ವು ಬೆಲ್ಟ್ ಏಟು..ವಿಡಿಯೋ

ಪಶ್ಚಿಮ ಬಂಗಾಳ : ಇತ್ತೀಚಿನ ದಿನಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕೆ ಏನು ಬೇಕಾದ್ದನ್ನು ಮಾಡುತ್ತಿದ್ದಾರೆ. ಒಳ್ಳೆಯದೋ ಕೆಟ್ಟದೋ ಟೋಟಲಿ ಫೇಮಸ್ ಆಗಬೇಕು, ಲೈಕ್ಸ್ ವ್ಯೂಸ್‌ ಗಳಿಸಬೇಕು ಎಂಬ ಹುಚ್ಚಿನಿಂದ ಹುಚ್ಚು ಸಾಹಸಕ್ಕಿಳಿಯುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪುಟ್ಟ ಹುಡುಗಿಯೋರ್ವಳು ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಗೊತ್ತಿದ್ದರೂ ಈ ಬಾಲಕಿ ರೀಲ್ಸ್‌ಗಾಗಿ ಹುಚ್ಚಾಟ ಮೆರೆದಿದ್ದಾಳೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಯುವತಿ, ರಾಜಾರೋಷವಾಗಿ ಸಿಗರೇಟ್ ಸೇದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಭಾರೀ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ಸಿಗರೇಟ್ ಸೇದಿದ ಆ ಹುಡುಗಿಗೆ ಮನೆಯಲ್ಲಿ ಭರ್ಜರಿಯಾಗೇ ಏಟು ಬಿದ್ದಿವೆ.

ಇನ್ನು ಇತ್ತೀಚಿಗಷ್ಟೇ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮಹಿಳೆಯೊಬ್ಬಳು ಸಿಗರೇಟ್ ಸೇದುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹೆಚ್ಚಿನ ಸುದ್ದಿ