Sunday, July 7, 2024
Homeಟಾಪ್ ನ್ಯೂಸ್North Korea : ಕಿಮ್‌ ಜಾಂಗ್ ಹುಚ್ಚಾಟ : ಸಂಗೀತ ಕೇಳಿದ್ದಕ್ಕೆ ರಸ್ತೆಯಲ್ಲೇ ಗಲ್ಲು ಶಿಕ್ಷೆ!

North Korea : ಕಿಮ್‌ ಜಾಂಗ್ ಹುಚ್ಚಾಟ : ಸಂಗೀತ ಕೇಳಿದ್ದಕ್ಕೆ ರಸ್ತೆಯಲ್ಲೇ ಗಲ್ಲು ಶಿಕ್ಷೆ!

ಸಿಯೋಲ್:‌ ಕೆ-ಪಾಪ್‌ ಸಂಗೀತವನ್ನು ಆಲಿಸಿದ 22 ವರ್ಷದ ಯುವಕನನ್ನು 2022ರಲ್ಲಿ ಉತ್ತರ ಕೊರಿಯಾದ ಸರ್ಕಾರ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ ಎಂಬ ಆಘಾತಕಾರಿ ವರದಿಯನ್ನು ದಕ್ಷಿಣ ಕೊರಿಯಾ ಬಹಿರಂಗಪಡಿಸಿದೆ.

ಹಿಂದಿನಿಂದಲೂ ಬಾಹ್ಯ ಪ್ರಪಂಚದ ಬಗ್ಗೆ ತಿಳಿಯುವುದಾಗಲೀ ಅದನ್ನು ಅಳವಡಿಸಿಕೊಳ್ಳುವುದಾಗಲೀ ತನ್ನ ಜನರಿಗೆ ಕಟ್ಟುನಿಟ್ಟಾಗಿ ನಿರ್ಬಂಧಿಸಿರುವ ಉತ್ತರ ಕೊರಿಯಾದ ಭೀಕರ ಸತ್ಯವನ್ನು ದಕ್ಷಿಣ ಕೊರಿಯಾ ಬಯಲಿಗೆಳೆಯುತ್ತಿದೆ. ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಉತ್ತರ ಕೊರಿಯಾದ ಮಾನವ ಹಕ್ಕುಗಳ 2024 ರ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದ ಸುಮಾರು 649 ಪ್ರಜೆಗಳಿಂದ ಈ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಉತ್ತರ ಕೊರಿಯಾದಿಂದ ಪಲಾಯನಗೊಂಡ ಜನರಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ದಕ್ಷಿಣ ಹ್ವಾಂಗೇ ಪ್ರಾಂತ್ಯದ 22 ವರ್ಷದ ಯುವಕ ಸುಮಾರು 70 ದಕ್ಷಿಣ ಕೊರಿಯಾದ ಹಾಡುಗಳನ್ನು ಆಲಿಸಿ, ಮೂರು ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ವೀಕ್ಷಿಸಿ ಹಾಗೂ ಅವುಗಳನ್ನು ವಿತರಿಸಿದ್ದಕ್ಕೆ ತಪ್ಪಿತಸ್ಥನೆಂದು ಘೋಷಿಸಲಾಗಿದೆ.

ಯುವಕ ಹೊರಗಿನ ಸಂಸ್ಕೃತಿಯೊಂದಿಗೆ ತೊಡಗಿಸಿಕೊಂಡಿದ್ದಕ್ಕಾಗಿ ವಿದೇಶಿ ಪ್ರಭಾವಗಳನ್ನು ನಿಗ್ರಹಿಸುವ ಮತ್ತು ಆಡಳಿತದ ನಿಯಂತ್ರಣವನ್ನು ನಿರ್ವಹಿಸುವ ಗುರಿಯಿಂದ ಆತನಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿ