Sunday, July 7, 2024
Homeಟಾಪ್ ನ್ಯೂಸ್EVM: ಯುಪಿಯಲ್ಲಿ 80 ಸ್ಥಾನ ಗೆದ್ದಿದ್ದರೂ ಇವಿಎಂ ನಂಬಲ್ಲ: ಅಖಿಲೇಶ್‌ ಯಾದವ್‌

EVM: ಯುಪಿಯಲ್ಲಿ 80 ಸ್ಥಾನ ಗೆದ್ದಿದ್ದರೂ ಇವಿಎಂ ನಂಬಲ್ಲ: ಅಖಿಲೇಶ್‌ ಯಾದವ್‌

ನವದೆಹಲಿ: ಉತ್ತರ ಪ್ರದೇಶದಲ್ಲಿ ನಾವು 80ಕ್ಕೆ 80 ಸ್ಥಾನಗಳನ್ನು ಗೆದ್ದಿದ್ದರೂ ಇವಿಎಂ ಅನ್ನು ನಂಬಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಅವರು, ಇವಿಎಂಗಳ ಮೇಲೆ ನಮಗೆ ನಂಬಿಕೆ ಹಿಂದೆಯೂ ಇರಲಿಲ್ಲ, ಇಂದು ಕೂಡಾ ಇಲ್ಲ. ಉತ್ತರ ಪ್ರದೇಶದಲ್ಲಿ ನಾವು ಎಲ್ಲಾ 80 ಸ್ಥಾನಗಳನ್ನು ಗೆದ್ದಿದ್ದರೂ ಇವಿಎಂ ಅನ್ನು ನಂಬುವುದಿಲ್ಲ. ಇವಿಎಂಗಳ ಸಮಸ್ಯೆಗಳು ಇನ್ನು ಕೂಡಾ ಜೀವಂತವಾಗಿದೆ ಎಂದು ಹೇಳಿದರು.

2024 ರ ಲೋಕಸಭಾ ಚುನಾವಣೆ ದೇಶದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದೆ. ಈ ಫಲಿತಾಂಶ ಇಂಡಿಯಾ ಮೈತ್ರಿಕೂಟದ ನೈತಿಕ ವಿಜಯವಾಗಿದೆ. ರಾಮಮಂದಿರ ನಿರ್ಮಾಣವಾಗಿರುವ ಅಯೋಧ್ಯೆಯ ಫೈಜಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿರುವುದು ಮತದಾರರ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಬಿಜೆಪಿಯ ಸೋಲು ಶ್ರೀರಾಮನ ಆಶಯವೂ ಆಗಿರಬಹುದು ಎಂದು ತಿರುಗೇಟು ನೀಡಿದರು.

ಹೆಚ್ಚಿನ ಸುದ್ದಿ