Sunday, July 7, 2024
Homeಕ್ರೀಡೆwomen-cricket : ಭಾರತ 603/6 ಡಿಕ್ಲೇರ್, ಫಾಲೋಆನ್ ಭೀತಿಯಲ್ಲಿ ದ.ಆಫ್ರಿಕಾ ವನಿತೆಯರು!

women-cricket : ಭಾರತ 603/6 ಡಿಕ್ಲೇರ್, ಫಾಲೋಆನ್ ಭೀತಿಯಲ್ಲಿ ದ.ಆಫ್ರಿಕಾ ವನಿತೆಯರು!

ಚೆನ್ನೈ :  ಭಾರತ ವನಿತೆಯರ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದರೆ ದಕ್ಷಿಣ ಆಫ್ರಿಕಾ ವನಿತೆಯರು ಫಾಲೋಆನ್ ಭೀತಿಗೆ ಸಿಲುಕಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಗೆ 603 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ನಂತರ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಗೆ 236 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಕುಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸುನೆ ಲ್ಲುಸ್ (65) ಮತ್ತು ಮರಿಜಾನೆ ಕ್ಯಾಪ್ (ಅಜೇಯ 69) ಅರ್ಧಶತಕ ಬಾರಿಸಿದ್ದೂ ಅಲ್ಲದೇ ಮೂರನೇ ವಿಕೆಟ್ ಗೆ 93 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಕೆಳ ಕ್ರಮಾಂಕದಲ್ಲಿ ನಡಿನೆ ಡಿ ಕ್ಲಾಕ್ (ಅಜೇಯ 27) ಕ್ರೀಸ್ ನಲ್ಲಿ ಉಳಿದುಕೊಂಡಿದ್ದಾರೆ.

ಭಾರತದ ಪರ ಸ್ನೇಹ್ ರಾಣಾ 3 ವಿಕೆಟ್ ಪಡೆದರೆ ಉಳಿದವರಿಂದ ದೊಡ್ಡ ಕಾಣಿಕೆ ಬರಲಿಲ್ಲ.

ಇದಕ್ಕೂ ಮುನ್ನ 4 ವಿಕೆಟ್ ಗೆ 525 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ವನಿತೆಯರ ತಂಡ 600ರ ಗಡಿ ದಾಟುತ್ತಿದ್ದಂತೆ ಡಿಕ್ಲೇರ್ ಮಾಡಿಕೊಂಡಿತು.

ತಂಡದ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ 115 ಎಸೆತಗಳಲ್ಲಿ 4 ಬೌಂಡರಿ ಸೇರಿದ 69 ರನ್ ಗಳಿಸಿದರೆ, ರಿಚಾ ಘೋಷ್ 90 ಎಸೆತಗಳಲ್ಲಿ 16 ಬೌಂಡರಿ ಒಳಗೊಂಡ 86 ರನ್ ಬಾರಿಸಿ ತಂಡವನ್ನು ಮುನ್ನಡೆಸಿದರು.

ಹೆಚ್ಚಿನ ಸುದ್ದಿ