Sunday, July 7, 2024
Homeಟಾಪ್ ನ್ಯೂಸ್VIDEO VIRAL: ಇವಳು ತಾಯಿಯೋ? ರಾಕ್ಷಸಿಯೋ? - ಮನಸ್ಸು ಗಟ್ಟಿ ಮಾಡಿ ಈ ಸುದ್ದಿ ನೋಡಿ...

VIDEO VIRAL: ಇವಳು ತಾಯಿಯೋ? ರಾಕ್ಷಸಿಯೋ? – ಮನಸ್ಸು ಗಟ್ಟಿ ಮಾಡಿ ಈ ಸುದ್ದಿ ನೋಡಿ…

ಮುಂಬೈ: ಮಹಿಳೆಯೊಬ್ಬಳು ತನ್ನ ಮಕ್ಕಳಿಗೆ ಬೆಲ್ಟ್‌ನಿಂದ (Belt) ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (Viral) ಆಗಿದೆ.

ಗೋರೆಗಾಂವ್‌ನಲ್ಲಿರುವ ನಿರ್ಲೋನ್ ಪಾರ್ಸಿ ಪಂಚಾಯತ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್‌ ಆಗುತ್ತಿರುವ ಈ ಅಮಾನವೀಯ ವಿಡಿಯೋವನ್ನು ಮಹಿಳೆಯ ಪತಿ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋವನ್ನು ಪತ್ರಕರ್ತೆ ದೀಪಿಕಾ ನಾರಾಯಣ್‌ ಭಾರದ್ವಾಜ್‌ ಎನ್ನುವವರು ಹಂಚಿಕೊಂಡಿದ್ದಾರೆ.

2 ನಿಮಿಷದ 46 ಸೆಕೆಂಡುಗಳಿರುವ ವಿಡಿಯೋದಲ್ಲಿ, ಮಹಿಳೆಯು ತನ್ನ ಮಕ್ಕಳನ್ನು ಗುಜರಾತಿ ಭಾಷೆಯಲ್ಲಿ ನಿಂದಿಸಿ ಬೆಲ್ಟ್‌ನಿಂದ ಹೊಡೆದು ಹೆದರಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಮಕ್ಕಳು ಭಯಭೀತರಾಗಿ ಅಳುತ್ತಿರುವುದನ್ನು ಗಮನಿಸಬಹುದಾಗಿದೆ. ಆದರೆ ಹೊಡೆತದಿಂದ ಮಕ್ಕಳನ್ನು ರಕ್ಷಿಸಲು ಪತಿ ಏಕೆ ಮಧ್ಯಪ್ರವೇಶಿಸಲಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.

ಘಟನೆಗೆ ಸಂಬಂಧಿಸಿ ಕ್ರಮಕೈಗೊಳ್ಳಲು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಶಾರುಖ್ ಕಥಾವಾಲಾ ಅವರು ಮುಂಬೈ ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ