Sunday, July 7, 2024
Homeಟಾಪ್ ನ್ಯೂಸ್ANANTH RADHIKA WEDDING: ಅನಂತ್ - ರಾಧಿಕಾ ಮಾಮೇರು ಸಮಾರಂಭ : ಏನಿದು? - VIDEO

ANANTH RADHIKA WEDDING: ಅನಂತ್ – ರಾಧಿಕಾ ಮಾಮೇರು ಸಮಾರಂಭ : ಏನಿದು? – VIDEO

ಮುಂಬೈ: ಅನಂತ್ ಅಂಬಾನಿ (Anant Ambani), ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹ ಪೂರ್ವ ಸಮಾರಂಭವಾದ ಮಾಮೇರು ಮುಂಬೈನಲ್ಲಿರುವ ಅಂಬಾನಿ ಅವರ ಆಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಡೆದಿದೆ.

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಅನೇಕ ವಿವಾಹ ಪೂರ್ವ ಸಮಾರಂಭಗಳು ನಡೆದಿದೆ. ಇದೀಗ ಗುಜರಾತಿ ಸಂಪ್ರದಾಯವಾದ ಮಾಮೇರು ಸಮಾರಂಭ ಅದ್ಧೂರಿಯಾಗಿ ನಡೆದಿದೆ. ‌ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮಮೇರುದಲ್ಲಿ ಪಾಲ್ಗೊಂಡು ಎಲ್ಲಾ ಆಚರಣೆಗಳನ್ನು ನೆರವೆರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಏನಿದು ಮಾಮೇರು?:
ಮಾಮೇರು ಸಮಾರಂಭವನ್ನು ಮೊಸಾಲು ಎಂದೂ ಕರೆಯುತ್ತಾರೆ. ಇದು ಗುಜರಾತಿನ ಸಾಂಪ್ರದಾಯಿಕ ಆಚರಣೆಯಾಗಿದ್ದು, ಈ ಸಮಯದಲ್ಲಿ ವಧುವಿನ ಸೋದರಮಾವ ಹಾಗೂ ಅತ್ತೆ ಸಿಹಿತಿಂಡಿಗಳು ಮತ್ತು ಉಡುಗೊರೆಗಳೊಂದಿಗೆ ವಧುವನ್ನು ಭೇಟಿ ಮಾಡುತ್ತಾರೆ.

ಸಮಾರಂಭದಲ್ಲಿ, ವಧು ಮತ್ತು ವರರು ತಾಯಿಯ ಆಶೀರ್ವಾದವನ್ನು ಪಡೆಯುತ್ತಾರೆ. ಇದು ತಾಯಿಯ ಸಂಬಂಧಿಕರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಭಾವನಾತ್ಮಕ ಆಚರಣೆಯಾಗಿದೆ. ವಧು-ವರರ ಮನೆಯಲ್ಲಿ ಮಾಮೇರು ಆಚರಣೆ ಪ್ರತ್ಯೇಕವಾಗಿ ನಡೆಯುತ್ತದೆ.

ಹೆಚ್ಚಿನ ಸುದ್ದಿ