Sunday, July 7, 2024
Homeಕ್ರೈಂSHOCKING : ನಡುರಸ್ತೆಯಲ್ಲೇ ಮಹಿಳೆಗೆ ಥಳಿಸಿದ್ರಾ ಟಿಎಂಸಿ ನಾಯಕ ?

SHOCKING : ನಡುರಸ್ತೆಯಲ್ಲೇ ಮಹಿಳೆಗೆ ಥಳಿಸಿದ್ರಾ ಟಿಎಂಸಿ ನಾಯಕ ?

ಕೋಲ್ಕತ್ತಾ: ಜನಸಂದಣಿಯ ನಟ್ಟ ನಡುವೆ ಟಿಎಂಸಿ ನಾಯಕನೊಬ್ಬ ಮಹಿಳೆ ಹಾಗೂ ಪುರುಷನೊಬ್ಬನಿಗೆ ದೊಣ್ಣೆಯಿಂದ ಥಳಿಸಿ ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ

ಈ ವಿಡಿಯೋದಲ್ಲಿರುವ ನಾಯಕ ತೃಣಮೂಲ ಕಾಂಗ್ರೆಸ್‌ ಪಕ್ಷದವನು ಎನ್ನಲಾಗುತ್ತಿದ್ದು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿರೋಧ ಪಕ್ಷಗಳಾದ ಸಿಪಿಎಂ ಮತ್ತು ಬಿಜೆಪಿ ಈ ವಿಡಿಯೋ ಹಂಚಿಕೊಂಡಿದ್ದು ಈ ಘಟನೆ ಉತ್ತರ ಬಂಗಾಳದ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ
ನಡೆದಿದೆ ಎಂದು ಹೇಳಿವೆ.

ಕೃತ್ಯದ ವಿರುದ್ಧ ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಇದೇ ನೋಡಿ I.N.D.I.A ಒಕ್ಕೂಟದ ಅಸಲಿ ಮುಖ ಎಂದು ಟೀಕಿಸಿವೆ.

ಅಕ್ರಮ ಸಂಬಂಧದ ಶಂಕೆಯ ಮೇರೆಗೆ ಈ ರೀತಿ ಮಹಿಳೆ ಹಾಗೂ ಪುರುಷನನ್ನು ಸಾರ್ವಜನಿಕವಾಗಿ ಥಳಿಸಲಾಗುತ್ತಿದ್ದು,ಜನರ ಗುಂಪು ಮೌನವಾಗಿ ಈ
ಘಟನೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವಳು ನೋವಿನಿಂದ ಅಂಗಲಾಚಿದರೂ, ಚೀರಿದರೂ ಆತ ಹೊಡೆಯುವುದನ್ನು ನಿಲ್ಲಿಸಿಲ್ಲ.

ಬಳಿಕ ಮಹಿಳೆಯ ಜತೆ ಇದ್ದ ಪುರುಷನಿಗೂ ಅದೇ ರೀತಿ ಥಳಿಸಲಾಗಿದ್ದು ಆದರೆ ಅಲ್ಲಿ ನೆರೆದಿದ್ದ ಜನ ಕೂಡ ಈ ಕೃತ್ಯವನ್ನು ಖಂಡಿಸದೇ ಮೂಕಪ್ರೇಕ್ಷಕರಾಗಿ ನಿಂತಿದ್ದರು.

ಹೆಚ್ಚಿನ ಸುದ್ದಿ