Sunday, July 7, 2024
Homeಕ್ರೀಡೆVIRAT KOHLI : ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ವೃತ್ತದಲ್ಲಿ ಕಿಂಗ್ ಕೊಹ್ಲಿ ಪ್ರತಿಮೆ! - VIDEO 

VIRAT KOHLI : ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ವೃತ್ತದಲ್ಲಿ ಕಿಂಗ್ ಕೊಹ್ಲಿ ಪ್ರತಿಮೆ! – VIDEO 

ಅಮೆರಿಕ : ಟೀಮ್  ಇಂಡಿಯಾದ ಮಾಜಿ ನಾಯಕ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯವರ ಪ್ರತಿಮೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ಅನಾವರಣಗೊಳಿಸಲಾಗಿದೆ.

2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಕಾರಣದಿಂದ ಕೊಹ್ಲಿಯ ಪ್ರತಿಮೆಯನ್ನು ಬ್ರಾಂಡ್ ಅಂಬಾಸಿಡರ್ ಆಗಿರುವ ಮ್ಯಾಟ್ರೆಸ್ ಕಂಪನಿಯೊಂದರ ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿದೆ.

ಹಾಸಿಗೆಗಳಿಂದ ಒದಗಿಸಲಾದ ಸೌಕರ್ಯವನ್ನು ಹೈಲೈಟ್ ಮಾಡಲು ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ವಿಡಿಯೋವನ್ನು ಮ್ಯಾಟ್ರೆಸ್ ಕಂಪನಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. 

ಹೆಚ್ಚಿನ ಸುದ್ದಿ