Sunday, July 7, 2024
Homeಕ್ರೀಡೆVIRAT KOHLI : ಬ್ರಾಂಡ್ ವ್ಯಾಲ್ಯೂ : ಬಾಲಿವುಡ್ ಸ್ಟಾರ್ ಗಳನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ 

VIRAT KOHLI : ಬ್ರಾಂಡ್ ವ್ಯಾಲ್ಯೂ : ಬಾಲಿವುಡ್ ಸ್ಟಾರ್ ಗಳನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ 

ಮುಂಬಯಿ: ಭಾರತದ ಅತ್ಯಂತ ಬೆಲೆ ಬಾಳುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು, ಸುಮಾರು 19 ಸಾವಿರ ಕೋಟಿ ರೂ. ಬ್ರಾಂಡ್ ಮೌಲ್ಯದ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

2023 ರಲ್ಲಿ 227.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ, ಟೀಮ್ ಇಂಡಿಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ  ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕುವ ಮೂಲಕ  ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

ಕೊಹ್ಲಿ  2022 ರಲ್ಲಿ 176.9 ಮಿಲಿಯನ್‌ ಡಾಲರ್ ಆದಾಯ ಗಳಿಸುವ ಮೂಲಕ 2 ನೇ ಸ್ಥಾನದಲ್ಲಿದ್ದರು. ಆದರೆ ಕಳೆದ 1 ವರ್ಷದಲ್ಲಿ ಅವರ ಆದಾಯ ಶೇಕಡಾ 30ರಷ್ಟು ಹೆಚ್ಚಾಗಿದೆ. ಈ ಮೂಲಕ ದೇಶದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಎನ್ನಲಾಗಿದೆ. 

kohli

ಜಾಗತಿಕ ಸಲಹಾ ಸಂಸ್ಥೆ ಕ್ರೋಲ್ ಬಿಡುಗಡೆ ಮಾಡಿದ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ 2023 ರ ಪ್ರಕಾರ, ಕೊಹ್ಲಿ ಅಗ್ರಸ್ಥಾನವನ್ನು ಅಲಂಕರಿಸಿದರೆ,  ನಟ ರಣವೀರ್ ಸಿಂಗ್ ಎರಡನೇ ಸ್ಥಾನ,  ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಆಲಿಯಾ ಭಟ್ ಕ್ರಮವಾಗಿ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ 3, 4 ಮತ್ತು 5 ನೇ ಸ್ಥಾನದಲ್ಲಿದ್ದಾರೆ.

ಹೆಚ್ಚಿನ ಸುದ್ದಿ